ಹೊಸದಿಲ್ಲಿ: ಜುಲೈ 2021ರವರೆಗೆ ಒಟ್ಟು 25 ಕೋಟಿ ಜನರಿಗೆ Corona Vaccine ನೀಡುವ ಯೋಜನೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಜನವರಿಯಿಂದ ಲಸಿಕೆ ನೀಡಲು ಆರಂಭಿಸಿದರೂ ಅದು 20-25 ಕೋಟಿ ಜನರನ್ನು ತಲುಪಲು 7 ತಿಂಗಳು ಸಮಯ ಹಿಡಿಯಲಿದೆ.
ಮೊದಲು ಯಾರಿಗೆ ಲಸಿಕೆ ನೀಡಬೇಕು ಎಂಬ ಶಿಫಾರಸನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಉನ್ನತ ಮಟ್ಟದ ತಜ್ಞರ ತಂಡ ಸರಕಾರದ ಮುಂದೆ ಮಂಡಿಸಲಿದೆ ಎಂದಿದ್ದಾರೆ.
ವಾರಿಯಯರ್ಸ್ ಗೆ ಹೆಚ್ಚಿನ ಆದ್ಯತೆ?
ಲಸಿಕೆ ನೀಡಿಕೆಯಲ್ಲಿ ಕೋವಿಡ್ 19 ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯರು, ದಾದಿಯರು ಮತ್ತಿತರರಿಗೆ ಸರಕಾರ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.
PublicNext
05/10/2020 08:01 am