ಕೊಚ್ಚಿ: ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಹೊಂದಿದ್ದ ವಿಚ್ಛೇದಿತ ಮಹಿಳೆಯೊಬ್ಬರು ಜನನ ಪ್ರಮಾಣ ಪತ್ರದಲ್ಲಿ ತಂದೆಯ ವಿವರ ನೀಡುವುದಿಲ್ಲ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
ವೀರ್ಯಾಣು ದಾನಿಯ ಸಹಾಯದಿಂದ ಜನಿಸಿದ ಮಗುವು ದಾನಿಯ ಗುರುತನ್ನು ಕಾನೂನಿನ ಅಡಿಯಲ್ಲಿ ಬಹಿರಂಗ ಪಡಿಸುವಂತಿಲ್ಲ. ಈ ರೀತಿ ಮಾಡಿದರೆ ಅದು ಖಾಸಗಿತನದ ಅಡ್ಡಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಅರ್ಜಿದಾರರು ಜನನ ಹಾಗೂ ಮರಣ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ನಮೂದಿಸಬೇಕೆಂದಿಲ್ಲ ಎಂದು ಕೇರಳ ಕೋರ್ಟ್ ಹೇಳಿದೆ.
ಅವಿವಾಹಿತೆ ಅಥವಾ ಒಂಟಿ ಮಹಿಳೆಯರು ಐವಿಎಫ್ ಮೂಲಕ ಕೃತಕ ಗರ್ಭಧಾರಣೆ ಮೂಲಕ ಪಡೆಯುವ ಮಕ್ಕಳ ತಂದೆಯ ವಿವರವನ್ನು ಜನನ ಹಾಗೂ ಮರಣ ನೋಂದಣಿಯಲ್ಲಿ ದಾಖಲಿಸುವಂತೆ ಕೋರುವುದು ತಾಯಿ ಹಾಗೂ ಮಗುವಿನ ಘನತೆಯ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಕೇರಳ ಉಚ್ಚ ನ್ಯಾಯಾಲಯ ಪ್ರತಿಪಾದಿಸಿದೆ.
ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮಕ್ಕಳ ಜನನ ಹಾಗೂ ಮರಣ ನೋಂದಣಿ ಮಾಡಲು ಸೂಕ್ತ ನಮೂನೆಯ ಅರ್ಜಿಗಳನ್ನು ರಾಜ್ಯ ಸರಕಾರ ಒದಗಿಸಬೇಕು ಎಂದು ಉಚ್ಚ ನ್ಯಾಯಾಲಯ ಸೂಚಿಸಿದೆ. ಮಹಿಳೆಯ ಪ್ರತಿಪಾದನೆಗೆ ಒಪ್ಪಿಗೆ ಸೂಚಿಸಿರುವ ಉಚ್ಚ ನ್ಯಾಯಾಲಯ ಐವಿಎಫ್ ನಂತಹ ಕೃತಕ ಗರ್ಭಧಾರಣೆಗೆ ಒಳಗಾಗುವ ಅವಿವಾಹಿತ ಅಥವಾ ಒಂಟಿ ಮಹಿಳೆಯ ಹಕ್ಕನ್ನು ಗುರುತಿಸಬೇಕು ಹಾಗೂ ದೇಶ ಅದನ್ನು ಒಪ್ಪಿಕೊಳ್ಳಬೇಕು.
ಇಂತಹ ಪ್ರಕ್ರಿಯೆಯಲ್ಲಿ ವೀರ್ಯದಾನಿಯ ಹೆಸರನ್ನು ಕಾನೂನಿನ ಅಡಿಯಲ್ಲಿ ಬಹಿರಂಗಪಡಿಸಲು ಒತ್ತಾಯಪಡಿಸಬಹುದಾದ ಸಂದರ್ಭ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಬಹಿರಂಗಪಡಿಸುವಂತಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
PublicNext
17/08/2021 07:57 am