ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಪ್ರಕರಣ ಹೆಚ್ಚಳ: ಮುಂಬೈನಲ್ಲಿ ಸೆಪ್ಟೆಂಬರ್ 17ರ ಮಧ್ಯರಾತ್ರಿಯಿಂದ ಸೆಕ್ಷನ್ 144 ಜಾರಿ

ಮುಂಬೈ : ಮುಂಬಯಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ನಗರದಲ್ಲಿ ಸೆಪ್ಟೆಂಬರ್ 17 ಮಧ್ಯರಾತ್ರಿಯಿಂದ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಲಾಗಿದೆ.

ನಿನ್ನೆ ಮಧ್ಯರಾತ್ರಿಯಿಂದ ಸೆಕ್ಷನ್ 144 ಜಾರಿಗೆ ಬಂದಿದ್ದು, ಸೆಪ್ಟೆಂಬರ್ 30 ರ ಮಧ್ಯರಾತ್ರಿ ಕೊನೆಗೊಳ್ಳಲಿದೆ. ಈ ಆದೇಶವು ಆಗಸ್ಟ್ 31 ರಂದು ಅಧಿಕಾರಿಗಳು ಹೊರಡಿಸಿದ ಹಿಂದಿನ ಆದೇಶದ ವಿಸ್ತರಣೆಯಾಗಿದೆ ಮತ್ತು ಹೊಸ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಮುಂಬೈ ಪೋಲಿಸ್ ಯಾವುದೇ ಹೊಸ ನಿರ್ಬಂಧಗಳನ್ನು ವಿಧಿಸಿಲ್ಲ ಭಯಪಡಬೇಡಿ ಎಂದು ಸಚಿವ ಆದಿತ್ಯ ಠಾಕ್ರೆ ಕೂಡ ಟ್ವೀಟ್ ಮಾಡಿದ್ದಾರೆ.

ಯಾವೆಲ್ಲಾ ಸೇವೆಗಳು ಲಭ್ಯ..?

* ತುರ್ತು ಸೇವೆ

* ಸರ್ಕಾರಿ ಅಥವಾ ಅರೆ / ಸರ್ಕಾರಿ ಸಂಸ್ಥೆಗಳು ಮತ್ತು ಕರ್ತವ್ಯದಲ್ಲಿರುವ ಅವರ ಅಧಿಕಾರಿಗಳು

* ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳು

* ಆಹಾರ, ತರಕಾರಿಗಳು, ಹಾಲು ಸರಬರಾಜು, ಪಡಿತರ ಮತ್ತು ದಿನಸಿ ಅಂಗಡಿಗಳು;

* ಆಸ್ಪತ್ರೆಗಳು, , ಫಾರ್ಮಾ ಮತ್ತು ಸಂಬಂಧಿತ ಸಂಸ್ಥೆಗಳು, ರೋಗಶಾಸ್ತ್ರ, ಪ್ರಯೋಗಾಲಯಗಳು, ವೈದ್ಯಕೀಯ / ಮೆಡಿಕಲ್ ಕಾಲೇಜುಗಳು.

* ದೂರವಾಣಿ ಮತ್ತು ಇಂಟರ್ನೆಟ್ ಸೇವೆಗಳು

* ವಿದ್ಯುತ್, ಪೆಟ್ರೋಲಿಯಂ, ತೈಲ ಮತ್ತು ಶಕ್ತಿಯ ಸಂಬಂಧಿತ,

* ಬ್ಯಾಂಕಿಂಗ್, ಸ್ಟಾಕ್ ಎಕ್ಸ್ಚೇಂಜ್, ಸ್ಟಾಕ್ ಬ್ರೋಕರ್ಗಳು

* ಅಂತರರಾಷ್ಟ್ರೀಯ ಮೂಲಸೌಕರ್ಯ ಹಾಗೂ ತುರ್ತು ಸೇವೆಗ

* ಮಾಧ್ಯಮ/ ಬಂದರುಗಳು

* ಆಹಾರ, ದಿನಸಿ ಮತ್ತು ಅಗತ್ಯ ವಸ್ತುಗಳ ಮನೆ ವಿತರಣೆಯನ್ನು ಒದಗಿಸುವ ಸೇವೆಗಳು

* ಇ-ಕಾಮರ್ಸ್ ಚಟುವಟಿಕೆ

* ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆ '

* ಟ್ರಕ್‌ಗಳು, ಸರಕುಗಳನ್ನು ಸಾಗಿಸುವ ಟೆಂಪೊ ಹೊರತುಪಡಿಸಿ ಹಲವು ಕ್ಷೇತ್ರಗಳಿಗೆ ನಿರ್ಬಂಧ ಹೇರಲಾಗಿದೆ.

Edited By :
PublicNext

PublicNext

18/09/2020 08:03 am

Cinque Terre

100.73 K

Cinque Terre

2