ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ – 19 ಲಕ್ಷಣಗಳಿದ್ರೆ ಹೀಗೆ ಮಾಡಿ : ಸಚಿವರು ಕೊಟ್ಟ ಟಿಪ್ಸ್ ಇಲ್ಲಿವೆ ನೋಡಿ

ನವದೆಹಲಿ: ಡೆಡ್ಲಿ ಸೋಂಕು ಕೊರೊನಾ ಹತೋಟಿಗೆ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರವೂ ಕೂಡಾ ಸೋಂಕು ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.

ಸದ್ಯ ಕೇಂದ್ರ ಸರ್ಕಾರ ಸೋಂಕು ಕಂಟ್ರೋಲ್ ಗಾಗಿ ಮತ್ತೊಂದು ಹೆಜ್ಜೆ ಇಟ್ಟಿದೆ. ಆಯುರ್ವೇದ ಹಾಗೂ ಯೋಗದ ಮೂಲಕ ಹೇಗೆ ಕೋವಿಡ್-19 ಪ್ರಕರಣ ನಿರ್ವಹಿಸಬಹುದು ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಶಿಷ್ಟಾಚಾರವೊಂದನ್ನು ಬಿಡುಗಡೆ ಮಾಡಿದ್ದಾರೆ.

ಶಿಷ್ಟಾಚಾರದಲ್ಲಿನ ಸಲಹೆಗಳು ಈ ಕೆಳಗಿನಂತಿವೆ.

* ರೋಗಲಕ್ಷಣ ರಹಿತ ಅಥವಾ ಲಘು ಲಕ್ಷಣವಿರುವ ಸೋಂಕಿತರಿಗೆ..

1. ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು. ತ್ರಿಫಲದೊಂದಿಗೆ ಕುದಿಸಿದ ಉಗುರು ಬೆಚ್ಚಗಿನ ನೀರಿನಿಂದಲೂ ಬಾಯಿ ಮುಕ್ಕಳಿಸಬಹುದು.

2. ಮೂಗಿನ ಹೊಳ್ಳೆಗಳಿಗೆ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿಕೊಳ್ಳಿ. ದಿನಕ್ಕೆ ಒಮ್ಮೆ ಅಥವಾ ಎರಡು ಸಲ ತುಪ್ಪವನ್ನೂ ಮೂಗಿಗೆ ಹಚ್ಚಿಕೊಳ್ಳಬಹುದು.

3. ಜೀರಿಗೆ, ಪುದಿನಾ ಎಲೆ ಅಥವಾ ಯುಕಾಲಿಪ್ಟಸ್ ಆಯಿಲ್ ಬೆರೆಸಿದ ಬಿಸಿನೀರಿನ ಹಬೆಯನ್ನು ದಿನಕ್ಕೊಮ್ಮೆ ತೆಗೆದುಕೊಳ್ಳುವುದು.

4. ಬರೀ ಬಿಸಿನೀರು ಇಲ್ಲವೆ ಶುಂಠಿ, ಕೊತ್ತಂಬರಿ ಅಥವಾ ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯುತ್ತಿರಿ.

5. ಅರಿಶಿಣ ಬೆರೆಸಿದ ಹಾಲನ್ನು ರಾತ್ರಿ ಕುಡಿಯಿರಿ. ಅಜೀರ್ಣ ಸಮಸ್ಯೆ ಇದ್ದರೆ ಬೇಡ.

6. ಆಯುಷ್ ಕಧಾ ಅಥವಾ ಕ್ವಾಥ್ ದಿನಕ್ಕೊಮ್ಮೆ ಕುಡಿಯಿರಿ.

* ಗಂಭೀರ ಲಕ್ಷಣಗಳಿದ್ದಲ್ಲಿ..

1. ಜ್ವರ, ಮೈಕೈ ನೋವು, ತಲೆನೋವು: ನಗರಾದಿ ಕಷಾಯ 20 ಮಿ.ಲೀ.ನಂತೆ ದಿನಕ್ಕೆರಡು ಸಲ ಕುಡಿಯಿರಿ.

2. ಕೆಮ್ಮು: ಜೇನುತುಪ್ಪದೊಂದಿಗೆ ಸೀತಾಫಲಾದಿ ಚೂರ್ಣವನ್ನು ದಿನಕ್ಕೆ 3 ಸಲ ಸೇವಿಸಿ.

3. ರುಚಿ ಇಲ್ಲದಿರುವುದು ಹಾಗೂ ಗಂಟಲು ಕೆರೆತ: ವ್ಯೋಷಾದಿ ವಾಟಿ ಗುಳಿಗೆಗಳನ್ನು 1 ಅಥವಾ 2 ಚೀಪುವುದು.

4. ಸುಸ್ತು: ಹತ್ತು ಗ್ರಾಂ ಚ್ಯವನಪ್ರಾಶವನ್ನು ಉಗುರು ಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಬೆರೆಸಿ ದಿನಕ್ಕೊಮ್ಮೆ ಸೇವಿಸಿ.

5. ಹೈಪಾಕ್ಸಿಯಾ (ಆಮ್ಲಜನಕ ಕೊರತೆ): ಹತ್ತು ಗ್ರಾಂ ವಾಸವಲೇಹ ಬಿಸಿನೀರಿನಲ್ಲಿ ಹಾಕಿ ಸೇವಿಸಿ.

6. ಅತಿಸಾರ: ಗುಟಜ ಘನ ವಾಟಿ, 500 ಮಿ.ಗ್ರಾಂ. ಗುಳಿಗೆಯನ್ನು ದಿನಕ್ಕೆ ಮೂರು ಸಲ ಸೇವಿಸಿ.

7. ಉಸಿರಾಟದ ಸಮಸ್ಯೆ: ಹತ್ತು ಮಿ.ಲೀ. ಕನಕಸವವನ್ನು ಅಷ್ಟೇ ನೀರಿನಲ್ಲಿ ಹಾಕಿ ದಿನಕ್ಕೆ ಎರಡು ಸಲ ಸೇವಿಸಿ.

ಈ ಶಿಷ್ಟಾಚಾರವನ್ನು ಐಸಿಎಂಆರ್ ಹಾಗೂ ಸಿಎಸ್ಐಆರ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

07/10/2020 01:56 pm

Cinque Terre

67.02 K

Cinque Terre

3