ನೈಜೀರಿಯಾ: ಕೊರೊನಾ-ಒಮಿಕ್ರಾನ್ ಇವೆಲ್ಲ ಹಾವಳಿ ಇಟ್ಟು ಹೋಗಿವೆ. ಆದರೆ ಈಗ ಮತ್ತೊಂದು ವೈರಸ್ ಜೀವ ಹಿಂಡಲು ಬರುತ್ತಿದೆ. ಆ ವೈರಸ್ ಹೆಸರು ಲಸ್ಸಾ.ಸದ್ಯ ನೈಜೇರಿಯಾ ಜನರಿಗೆ ಕಾಡುತ್ತಿದೆ.
ಲಸ್ಸಾ ವೈರಸ್ ದಿಂದ ನೈಜೀರಿಯಾ ಜನಕ್ಕೆ ತ್ವರಿತ ಗತಿಯಲ್ಲಿ ಜ್ವರ ಬರುತ್ತಿದೆ. ಒಬ್ಬರಿಗೆ ಹರಡಿದರೆ ಮತ್ತೊಬ್ಬರಿಗೆ ಅಷ್ಟೇ ವೇಗದಲ್ಲಿಯೇ ಜ್ವರ ಬರ್ತಾ ಇದೆ.
ಅತೀ ವೇಗದಲ್ಲಿಯೇ ಹರಡುತ್ತಿರೋ ಈ ಲಸ್ಸಾ ವೈರಸ್ ಬಗ್ಗೆನೂ ಈಗ ಇಡೀ ಜಗತ್ತಲ್ಲಿ ಆತಂಕ ಸೃಷ್ಟಿ ಆಗಿದೆ. ದುರಂತ ಅಂದ್ರೆ ನೈಜೀರಿಯಾದ ರೋಗ ನಿಯಂತ್ರಣ ಕೇಂದ್ರ ಕೊಟ್ಟ ಮಾಹಿತಿ ಪ್ರಕಾರ, ಇಲ್ಲಿ ಒಟ್ಟು 88 ದಿನಗಳಲ್ಲಿ 123 ಜನ ಲಸ್ಸಾ ವೈರಸ್ ನಿಂದ ಮೃತಪಟ್ಟಿದ್ದಾರೆ.
ಈಗಾಗಲೇ ಲಸ್ಸಾ ವೈರಸ್ 659 ಜನಕ್ಕೆ ದೃಢಪಟ್ಟಿದೆ. ಬ್ರಿಟನ್ ದೇಶದಲ್ಲೂ ಲಸ್ಸಾ ವೈರಸ್ ಪತ್ತೆ ಆಗಿದೆ. ಒಬ್ಬ ಈ ಲಸ್ಸಾ ಸೋಂಕಿಗೆ ಮೃತಪಟ್ಟಿದ್ದಾನೆ.
PublicNext
30/03/2022 05:40 pm