ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಸದ್ದು ಮಾಡುತ್ತಿದೆ ಕೊರೊನಾ : ಜಾಗತಿಕ ಮಟ್ಟದಲ್ಲಿ ತಲ್ಲಣ

ನವದೆಹಲಿ: ಕೊರೊನಾ ಕಣ್ಮರೆಯಾಗುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಸ್ವಲ್ಪ ನೆಮ್ಮದಿಯಿಂದಿದ್ದ ಜನಕ್ಕೆ ಮತ್ತೆ ಕೋವಿಡ್ ಕಿರಿಕಿರಿ ಶುರುವಾಗಿದೆ. ಹೌದು ಜಾಗತಿಕವಾಗಿ ಕಳೆದ ವಾರಕ್ಕೆ ಹೋಲಿಸಿದರೆ ಶೇ. 8ರಷ್ಟು ಹೆಚ್ಚಳ ಆಗಿದೆ. ಮಾರ್ಚ್ 7ರಿಂದ 13ರವರೆಗಿನ ಅವಧಿಯಲ್ಲಿ 1.10 ಕೋಟಿ ಹೊಸ ಕೇಸ್ ಗಳು ಕಂಡುಬಂದಿದ್ದು, 43 ಸಾವಿರ ಜನರು ಸಾವನ್ನಪ್ಪಿದ್ದಾರೆ.

ಪಶ್ಚಿಮ ಪೆಸಿಫಿಕ್ ರಾಷ್ಟ್ರಗಳಲ್ಲಿ ಸೋಂಕು ಅಧಿಕವಾಗಿದೆ. ದಕ್ಷಿಣ ಕೊರಿಯಾ ಮತ್ತು ಚೀನಾಗಳಲ್ಲಿ ಶೇ. 25ರಷ್ಟು ಕೇಸ್ ಗಳು ಹಾಗೂ ಶೇ. 27 ರಷ್ಟು ಸಾವಿನ ಸಂಖ್ಯೆ ಏರಿದೆ. ಆಫ್ರಿಕಾ ದೇಶಗಳಲ್ಲಿ 12ರಷ್ಟು ಹೊಸ ಕೇಸ್, ಶೇ. 14ರಷ್ಟು ಸಾವು ಏರಿಕೆಯಾಗಿದ್ದರೆ, ಯುರೋಪ್ ನಲ್ಲಿ ಶೇ. 2ರಷ್ಟು ಕೊರೊನಾ ಏರಿಕೆ ಕಂಡಿದೆ ಎಂದು ಡಬ್ಲ್ಯೂಎಚ್ ಒ ವಿವರಿಸಿದೆ.

ದೇಶದಲ್ಲಿ ಶೇ. 88ರಷ್ಟು ಅರ್ಹರು ಲಸಿಕೆ ಪಡೆದಿದ್ದಾರೆ. ಜಾಗತಿಕವಾಗಿ ಹೋಲಿಸಿದರೆ ಮೂರನೇ ಡೋಸ್ ಪಡೆದವರ ಸಂಖ್ಯೆ ಕೂಡ ದಕ್ಷಿಣ ಕೊರಿಯಾದಲ್ಲಿ ಹೆಚ್ಚಿದೆ. ಇದರಿಂದಾಗಿ ಇಲ್ಲಿ ಸಾವಿನ ಪ್ರಮಾಣ ಶೇ. 0.14 ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇಸ್ರೇಲ್ ನಲ್ಲಿ ಕೋವಿಡ್ ಸೋಂಕಿನ ಹೊಸ ತಳಿ ಪತ್ತೆಯಾಗಿದ್ದು, ಹೊಸ ತಳಿಯ ಎರಡು ಪ್ರಕರಣಗಳು ವರದಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಇಂಥ ತಳಿ ಇನ್ನು ವರದಿಯಾಗಿಲ್ಲವಾದ ಕಾರಣ ಇದನ್ನು ‘ರಹಸ್ಯ ತಳಿ’ ಅಥವಾ ‘ಕನ್ಸರ್ನ್’ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

18/03/2022 07:36 am

Cinque Terre

42.75 K

Cinque Terre

13