ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂಬಾಕು ಸೇವನೆಯಲ್ಲಿ ಭಾರತ ವಿಶ್ವಕ್ಕೆ ನಂ. 2

ನವದೆಹಲಿ: ಅತಿ ಹೆಚ್ಚು ಧೂಮಪಾನಿಗಳನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋಕಿಂಗ್ ಎಂಬ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಭಾರತದಲ್ಲಿ 16ರಿಂದ 64ರ ವಯೋಮಾನ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರೆ ಎಂಬ ಆತಂಕಕಾರಿ ಅಂಶ ಈ ವರದಿಯಿಂದ ಹೊರಬಂದಿದೆ.

ತಂಬಾಕು ವ್ಯಸನದಲ್ಲಿ ವಿಶ್ವಕ್ಕೆ ಎರಡನೇ ಸ್ಥಾನದಲ್ಲಿರುವ ಚೀನಾದಲ್ಲಿ 16ರಿಂದ 64 ವರ್ಷದೊಳಗಿನ 50 ಕೋಟಿಗಿಂತ ಹೆಚ್ಚು ಮಂದಿ ತಂಬಾಕಿನ ಉತ್ಪನ್ನಗಳನ್ನು ಸೇವಿಸುತ್ತಾರೆ. ವಿಶ್ವದಾದ್ಯಂತ ವರ್ಷಕ್ಕೆ 8 ಲಕ್ಷ ಮಂದಿಯ ಸಾವು ಮತ್ತು 20 ಕೋಟಿ ಜನರ ಅಂಗವಿಕಲತೆಗೆ ಕಾರಣವಾಗುವ ತಂಬಾಕಿಗೆ ಈಗಲೂ 114 ಕೋಟಿ ಮಂದಿ ದಾಸರಾಗಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

Edited By : Nagaraj Tulugeri
PublicNext

PublicNext

19/11/2021 06:42 pm

Cinque Terre

56.84 K

Cinque Terre

5

ಸಂಬಂಧಿತ ಸುದ್ದಿ