ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಸಿಕೆ ಪಡೆದುಕೊಂಡಿದ್ದ 23 ಮಂದಿ ಸಾವು

ಓಸ್ಲೋ: ವಿಶ್ವಕ್ಕೆ ಕಂಟಕವಾಗಿದ್ದ ಕೋವಿಡ್ – 19 ಗೆ ಕೊನೆಗೂ ಮದ್ದು ಲಭಿಸಿದೆ.

ಆದರೆ ನಾರ್ವೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 23 ಮಂದಿ ವಯೋ ವೃದ್ಧರು ಮೃತಪಟ್ಟಿದ್ದಾರೆ.

ಇದರಿಂದ ನಾರ್ವೆ ಸರ್ಕಾರ ವಯೋವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡದಂತೆ ಸೂಚಿಸಿದೆ.

ಫೈಝರ್ ಎನ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದ 23 ವೃದ್ಧರು ಸಾವನ್ನಪ್ಪಿದ್ದಾರೆ. ಈ ಪೈಕಿ 13 ಮಂದಿಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವ್ಯಾಕ್ಸಿನೇಷನ್ ನಂತರ ಉಂಟಾದ ಅಡ್ಡ ಪರಿಣಾಮಗಳ ತೀವ್ರತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ನಾರ್ವೇಜಿಯನ್ ಮೆಡಿಸಿನ್ಸ್ ಏಜೆನ್ಸಿ ವರದಿ ಮಾಡಿದೆ.

Edited By : Nirmala Aralikatti
PublicNext

PublicNext

16/01/2021 03:19 pm

Cinque Terre

154.24 K

Cinque Terre

39