ಬೀಜಿಂಗ್ : ಕೊರೊನಾ ವೈರಸ್ ಕಾಕತಾಳೀಯ ನ್ಯತ್ಯ ಕಡಿಮೆಯಾಗಿಲ್ಲ ವಿಶ್ವವನ್ನೇ ಭಯದ ಕೂಪಕ್ಕೆ ತಳ್ಳಿದ ಕೊರೊನಾ ಬೆನ್ನಲ್ಲೇ ಈಗ ಮತ್ತೊಂದು ಬ್ಯಾಕ್ಟೀರಿಯಾ ಒಂದು ಕಾಣಿಸಿಕೊಂಡು ಆತಂಕ ತಂದೊಡ್ಡಿದೆ.
ಹೌದು ! ಕಳೆದ ವರ್ಷ ವಾಯುವ್ಯ ಚೀನಾದ ಜೈವಿಕ ಔಷಧ ಕಂಪೆನಿಯಲ್ಲಿ ಸೋರಿಕೆಯಾದ ಬ್ಯಾಕ್ಟೀರಿಯಾದ ರೋಗವಾದ ಬ್ರುಸೆಲ್ಲೋಸಿಸ್ ಇದೀಗ ತನ್ನ ರೌದ್ರ ಸ್ವರೂಪ ಬಿತ್ತರಿಸುತ್ತಿದೆ.
ಈಗಾಗಲೇ 3,245 ಜನರು ಈ ವೈರಸ್ ಒಳಪಟ್ಟಿದೆ ಎಂದು ಚೀನಾದ ಅಧಿಕಾರಿಗಳೇ ತಿಳಿಸಿದ್ದು, ಚೀನಾ ಗ್ಯಾನ್ಸು ಪ್ರಾಂತ್ಯದ ರಾಜಧಾನಿ ಲಾಂಝೌನಲ್ಲಿ ಈ ರೋಗ ಕಾಣಿಸಿದ್ದು ಬ್ಯಾಕ್ಟೀರಿಯಾ ಬ್ರುಸೆಲ್ಲಾವನ್ನು ಹೊತ್ತೊಯ್ಯುವ ಜಾನುವಾರುಗಳ ಸಂಪರ್ಕದಿಂದ ಉಂಟಾಗಿದೆ ಎಂದು ಚೀನಾದ ಆರೋಗ್ಯ ಇಲಾಖೆ ಹೇಳಿದೆ.
ಈ ಬ್ಯಾಕ್ಟೀರಿಯಾ ಪುರುಷರ ಮೇಲೆ ತೀವ್ರ ಪರಿಣಾಮ ಬೀರಲಿದ್ದು ವೃಷಣಗಳ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡಿ ಉರಿಯೂತದ ವೃಷಣ ಬಾಧಿಸಿ ಇದರಿಂದ ಪುರುಷರ ಬಂಜೆತನ ಉಂಟಾಗುವ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಸಂಸ್ಥೆ ಹೇಳಿದೆ.
ಬ್ರುಸೆಲ್ಲೋಸಿಸ್ ಮಾಲ್ಟಾ ಜ್ವರ ಅಥವಾ ಮೆಡಿಟರೇನಿಯನ್ ಜ್ವರ ಎಂದೂ ಹೆಸರಿದ್ದು ಇದು ತಲೆನೋವು, ಸ್ನಾಯು ನೋವು, ಜ್ವರ ಮತ್ತು ಆಯಾಸ ಉಂಟು ಮಾಡಬಹುದು ಎಂದು ಹೇಳಿದೆ.
ಹಾಗೆ ಸಂಧಿವಾತ ಅಥವಾ ಕೆಲವು ಅಂಗಗಳಲ್ಲಿ ಊತ ಕಾಣಿಸುವ ಲಕ್ಷಣ ಇವೆ ಎಂದು ತಿಳಿಸಿದೆ.
PublicNext
18/09/2020 06:34 pm