ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾಗೆ ಮದ್ದು ತಯಾರಿಯಲ್ಲಿ ರಷ್ಯಾ ಮುಂದು : 2 ನೇ ಲಸಿಕೆ ಪ್ರಯೋಗ ಯಶಸ್ವಿ!

ರಷ್ಯಾ : ಡೆಡ್ಲಿ ಕೊರೊನಾ ಹತೋಟಿಗಾಗಿ ಬಹುತೇಕ ರಾಷ್ಟ್ರಗಳು ಲಸಿಕೆ ಸಂಶೋಧನೆಯಲ್ಲಿ ಬ್ಯುಜಿಯಾಗಿವೆ.

ರಷ್ಯಾ ಈಗಾಗಲೇ ವಿಶ್ವದ ಮೊದಲ ಕೊರೋನಾ ಲಸಿಕೆ ಸಂಶೋಧಿಸಿರುವುದಾಗಿ ಹೇಳಿಕೊಂಡಿತ್ತು.

ಪ್ರಯೋಗದಲ್ಲೂ ಇದು ಯಶಸ್ವಿಯಾಗಿದೆ ಎಂದಿತ್ತು. ಇದೀಗ ರಷ್ಯಾದಿಂದ ಮತ್ತೊಂದು ಕೊರೋನಾ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ.

ಎಪಿವ್ಯಾಕ್ ಕೊರೋನಾ ಅನ್ನೋ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಟಾಪ್ ಸೀಕ್ರೆಟ್ ವೈರೋಲಜಿಸ್ಟ್ ಸೆಂಟರ್ ವೆಕ್ಟರ್ ವರದಿ ಮಾಡಿದೆ.

ಮೊದಲ ಹಂತದ 2 ಪ್ರಯೋಗಗಳು ಯಶಸ್ವಿಯಾಗಿದೆ. ಅಂತಿಮ ಹಂತದ ಪ್ರಯೋಗ ನಡೆಯತ್ತಿದ್ದು, ಇದರ ಫಲಿತಾಂಶದ ವರದಿ ಆಧರಿಸಿ ರಷ್ಯಾದ 2ನೇ ಕರೋನಾ ವೈರಸ್ ಲಸಿಕೆ ಕುರಿತು ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎಂದು ವೆಕ್ಟರ್ ಹೇಳಿದೆ.

ಸದ್ಯ ನಡೆಸಿರುವ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಕೊರೋನಾ ವೈರಸ್ ವಿರುದ್ಧ ಪರಿಣಾಮಕಾರಿಯಾದ ಲಸಿಕೆ ಇದಾಗಿದ್ದು, ಶೀಘ್ರದಲ್ಲೇ ಅಂತಿಮ ರೂಪ ಸಿಗುವ ವಿಶ್ವಾಸವಿದೆ ಎಂದು ವೆಕ್ಟರ್ ಹೇಳಿದೆ.

Edited By : Nirmala Aralikatti
PublicNext

PublicNext

02/10/2020 10:59 pm

Cinque Terre

79.91 K

Cinque Terre

1