ಜಿನೀವಾ: ಹೆಮ್ಮಾರಿ ಕೊರೊನಾದಿಂದ ಜಗತ್ತಿನ ಅನೇಕ ದೇಶಗಳು, ದ್ವೀಪ ಪ್ರದೇಶಗಳು ತತ್ತರಿಸಿವೆ. ಕೋವಿಡ್ ಸೃಷ್ಟಿಸಿದ ಆತಂಕದಿಂದ ಕೆಲ ದೇಶಗಳ ಆರ್ಥಿಕ ಸ್ಥಿತಿ ಭಾರಿ ಕುಂದಿದೆ. ಇದರ ಮಧ್ಯೆ ಜಗತ್ತಿನ 9 ದೇಶ ಹಾಗೂ ಪ್ರಾಂತ್ಯಗಳಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ.
ಹೌದು. ವಿಶ್ವ ಆರೋಗ್ಯ ಸಂಸ್ಥೆ (WHO) ಹಂಚಿಕೊಂಡ ಪಟ್ಟಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಒಂಬತ್ತು ದೇಶಗಳು ಮತ್ತು ಪ್ರಾಂತ್ಯಗಳು ಇಲ್ಲಿಯವರೆಗೆ ಶೂನ್ಯ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಎಂದು ತಿಳಿಸಲಾಗಿದೆ. ಈ ಪಟ್ಟಿಯಲ್ಲಿ ಟುವಾಲು, ತುರ್ಕಮೆನಿಸ್ತಾನ್, ಟೊಕೆಲೌ, ಸೇಂಟ್ ಹೆಲೆನಾ, ಪಿಟ್‌ಕೈರ್ನ್ ದ್ವೀಪಗಳು, ನಿಯು, ನೌರು, ಮೈಕ್ರೋನೇಷಿಯಾ ಮತ್ತು ಉತ್ತರ ಕೊರಿಯಾ ಸೇರಿವೆ. WHO ಪಟ್ಟಿಯ ಪ್ರಕಾರ, ಯುರೋಪ್‌ನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ, ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಗ್ನೇಯ ಏಷ್ಯಾ ಇದೆ.
PublicNext
18/02/2022 03:45 pm