ವಾಷಿಂಗ್ಟನ್: ಸುಮಾರು ಎರಡು ವರ್ಷಗಳಿಂದ ಇಡೀ ಪ್ರಪಂಚವನ್ನು ಬೆನ್ನಟ್ಟಿ ಕಾಡುತ್ತಿರುವ ಕೊರೊನಾ ಮನುಷ್ಯ ಕುಲದ ಜನ್ಮ ಜಾಲಾಡಿಬಿಟ್ಟಿದೆ. ಆದ್ರೆ ಕಣ್ಣಿಗೆ ಕಾಣದ ಈ ಸೋಂಕು ಈಗ ಅಂತ್ಯ ಕಾಲದ ಸಮೀಪದಲ್ಲಿದೆ ಎಂದು ಅಮೆರಿಕದ ವಿಜ್ಞಾನಿ ಹಾಗೂ ವೈರಾಲಜಿಸ್ಟ್ ಆಗಿರುವ ಡಾ. ಕುತುಬ್ ಮಹಮೂದ್ ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆಯು ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತಿದೆ. ಕೊರೊನಾ ರೂಪಾಂತರ ಹೊಂದುವುದರಲ್ಲಿ ಅಚ್ಚರಿ ಇಲ್ಲ. ಕೆಲವು ಸಂದರ್ಭದಲ್ಲಿ ಮರುಸೋಂಕು ಉಂಟಾದಾಗ ಬೂಸ್ಟರ್ ಡೋಸ್‌ನಿಂದ ಸರಿಪಡಿಸಬಹುದು ಎಂದಿದ್ದಾರೆ.
ಕೊರೊನಾ ವೈರಸ್ ಹಾಗೂ ಮನುಷ್ಯರ ನಡುವಿನ ಹೋರಾಟ ಚೆಸ್ ಆಟವಿದ್ದಂತೆ. ರೋಗನಿರೋಧಕ ಪ್ರತಿಕಾಯಗಳೇ ಇದಕ್ಕೆ ಅಸ್ತ್ರ. ಸದ್ಯದರಲ್ಲೇ ಪಂದ್ಯ ಡ್ರಾ ಆಗಲಿದೆ. ಅಂದರೆ ಜನರು ಮಾಸ್ಕ್ ಇಲ್ಲದೇ ಓಡಾಡುವ ದಿನಗಳು ಹತ್ತಿರ ಬರುತ್ತಿವೆ ಎಂದರ್ಥ ಎಂದು ಡಾ. ಕುತುಬ್ ಹೇಳಿದ್ದಾರೆ.
PublicNext
16/01/2022 10:28 pm