ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಟ್ಟೂರಲ್ಲಿ ಮತ್ತೆ ಕೊರೊನಾರ್ಭಟ : ಜನ ತತ್ತರ

ಬೀಜಿಂಗ್ : ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಪರಿಚಯಿಸಿದ ಚೀನಾದಲ್ಲಿ ಕೊರೊನಾ ಮತ್ತೆ ತನ್ನ ರೌದ್ರ ನರ್ತನ ಆರಂಭಿಸಿದೆ. ಈಗಾಗಲೇ ಚೀನಾದಲ್ಲಿ 107 ಕೋಟಿಗೂ ಹೆಚ್ಚು ಜನರಿಗೆ ಸಂಪೂರ್ಣ ಲಸಿಕೆ ಹಾಕಿದ್ದರೂ ಮತ್ತೆ ಸಾಂಕ್ರಾಮಿಕತೆ ಮತ್ತೆ ಉಲ್ಬಣಗೊಳ್ಳುತ್ತಿದೆ. 14 ಪ್ರಾಂತ್ಯಗಳಲ್ಲಿ ಮಹಾಮಾರಿ ಹರಡಿ ಕಳವಳ ಉಂಟು ಮಾಡಿದೆ. ಹೀಗಾಗಿ ಬಂದರುಗಳ ಪ್ರವೇಶದ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದಾರೆ.

ಅಕ್ಟೋಬರ್ 17ರಿಂದ 29ರ ನಡುವೆ ಸುಮಾರು 377 ಪ್ರಕರಣಗಳು ಸ್ಥಳಿಯವಾಗಿ ಹರಡಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ಅಧಿಕಾರಿಗಳು ತಿಳಿಸಿದ್ದಾರೆ.

2020ರ ಆರಂಭದಲ್ಲೇ ಸಾಂಕ್ರಾಮಿಕತೆಗೆ ಚೀನಾ ಕಡಿವಾಣ ಹಾಕಿದ್ದರೂ ಆಗಾಗ ಸೋಂಕು ಸ್ಫೋಟಗೊಳ್ಳುತ್ತಲೇ ಇದ್ದು ಸರ್ಕಾರದ ತಲೆನೋವನ್ನು ಹೆಚ್ಚಿಸಿದೆ.

Edited By : Nirmala Aralikatti
PublicNext

PublicNext

01/11/2021 07:39 am

Cinque Terre

35.8 K

Cinque Terre

8