ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೂಪಾಂತರ ಕೊರೊನಾ ವೈರಸ್ : ವಿಶ್ವದಾದ್ಯಂತ 24 ಗಂಟೆಗಳಲ್ಲಿ 5,75,000 ಕೇಸ್ ದೃಢ

ಜಿನಿವಾ ; ವಿಶ್ವದಾದ್ಯಂತ ಕೊರೊನಾ ಮಹಾಮಾರಿ ದಾಳಿಗೆ ತತ್ತರಿಸಿದ ಜನ ಈಗಷ್ಟೆ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ.

ಇದರ ಮಧ್ಯೆ ರೂಪಾಂತರ ವೈರಸ್ ನಿಂದಾಗಿ ಜನ ಮತ್ತೆ ಆತಂಕಕ್ಕೇ ಒಳಗಾಗಿದ್ದಾರೆ.

ಒಂದೇ ದಿನದಲ್ಲಿ ಬರೋಬ್ಬರಿ 5,75,000 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ 575,000 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 75,704,857 ಕ್ಕೆ ಏರಿಕೆಯಾಗಿದೆ.

ಇನ್ನು ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ವರೆಗೂ 1,690,061 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಈ ನಡುವೆ ಕೊರೊನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಅಕ್ಷರಶಃ ನಲುಗಿ ಹೋಗಿದ್ದು, ಈ ವರೆಗೂ ಆ ರಾಷ್ಟ್ರದಲ್ಲಿ ಬರೋಬ್ಬರಿ 326,772 ಮಂದಿ ಬಲಿಯಾಗಿದ್ದಾರೆ, ಅಲ್ಲದೆ, 18,473,716 ಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿದ್ದಾರೆ.

ಇನ್ನು ಹೆಚ್ಚು ಕೊರೊನಾ ಬಾಧಿತ ರಾಷ್ಟ್ರಗಳ 10 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈ ವರೆಗೂ 10,075,422 ಮಂದಿ ಸೋಂಕಿಗೊಳಗಾಗಿದ್ದು, 146,145 ಮಂದಿ ಸಾವನ್ನಪ್ಪಿದ್ದಾರೆ.

3ನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 7,264,221 ಮಂದಿ ಸೋಂಕಿನಿಂದ ಬಳಲುತ್ತಿದ್ದು, 187,322 ಮಂದಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

22/12/2020 01:25 pm

Cinque Terre

102.47 K

Cinque Terre

2

ಸಂಬಂಧಿತ ಸುದ್ದಿ