ಬೀಜಿಂಗ್ : ಇಡೀ ವಿಶ್ವಕ್ಕೆ ಕೊರೊನಾ ಗಿಫ್ಟ್ ಕೊಟ್ಟ ದೇಶ ಈಗ ಆರ್ಥಿಕವಾಗಿ ಮತ್ತೆ ಪುಟಿದೇಳುತ್ತಿದೆ.
ಹೌದು ಜನವರಿಯಿಂದ ಹಣಕಾಸು ವರ್ಷ ಹೊಂದಿರುವ ಚೀನಾದ ಮೂರನೇ ತ್ರೈಮಾಸಿಕ ವರದಿ ಪ್ರಕಟಗೊಂಡಿದ್ದು, ಜಿಡಿಪಿ ದರ ಶೇ.4.9 ರಷ್ಟು ಪ್ರಗತಿ ಕಂಡಿದೆ.
ಕೋವಿಡ್ 19 ನಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಮೈನಸ್ ಶೇ. 6.8ರಷ್ಟು ಕುಸಿತ ಕಂಡಿತ್ತು. ಇದು ಕಳೆದ 44 ವರ್ಷದಲ್ಲಿ ಅತ್ಯಂತ ಕಳಪೆ ಸಾಧನೆಯಾಗಿತ್ತು.
ಬಳಿಕ ಸರ್ಕಾರ ಆರ್ಥಿಕತೆ ಚೇತರಿಕೆಗೆ ಕೈಗೊಂಡ ಕ್ರಮಗಳಿಂದಾಗಿ 2ನೇ ತ್ರೈಮಾಸಿಕದಲ್ಲಿ ಶೇ.3.2ರಷ್ಟು ಏರಿಕೆ ಕಂಡಿತ್ತು.
ಈಗ ಈ ಚೇತರಿಕೆ ಪ್ರಮಾಣ ಶೇ.4.9ಕ್ಕೆ ಏರಿಕೆಯಾಗಿದೆ.
ಬೇಡಿಕೆ ಮತ್ತು ಖರೀದಿ ಹೆಚ್ಚಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಆರ್ಥಿಕತೆ ಏರಿಕೆಯಾಗುತ್ತಿದೆ.
ಆರ್ಥಿಕ ಕುಸಿತದಿಂದ ಪಾರಾಗಲು ಚೀನಾ ಸರ್ಕಾರ ತೆರಿಗೆ ರಿಯಾಯಿತಿ ಪ್ರಕಟಿಸಿತ್ತು. ಸಾಲದ ಮೇಲಿನ ಬಡ್ಡಿ ದರ ವನ್ನು ಇಳಿಕೆ ಮಾಡಿತ್ತು.
PublicNext
20/10/2020 12:50 pm