ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಕ್ಕೆ ಮತ್ತೊಂದು ಚೀನೀ ವೈರಸ್ ಎಂಟ್ರಿ- ಕ್ಯಾಟ್ ಕ್ಯೂ ಬಗ್ಗೆ ಐಸಿಎಂಆರ್ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 60 ಲಕ್ಷ ದಾಟಿರುವಂತೆಯೇ ಮತ್ತೊಂದು ಚೀನೀ ವೈರಸ್‌ ದೇಶಕ್ಕೆ ಅದರಲ್ಲೂ ಕರ್ನಾಟಕಕ್ಕೆ ಎಂಟ್ರಿಕೊಟ್ಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ, ಚೀನಾದಿಂದ “ಕ್ಯಾಟ್ ಕ್ಯೂ ವೈರಸ್‌ (Cat Que Virus-CQV)’ ಭಾರತಕ್ಕೆ ಪ್ರವೇಶಿಸಿದೆ. ಅದೂ ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ವೈರಸ್ ಉಣ್ಣೆ, ಸೊಳ್ಳೆ ಮೊದಲಾದ ಕೀಟಗಳಿಂದ ಹರಡುವ ರೋಗವಾಗಿದ್ದು, ಈಗಾಗಲೇ ವಿಯೆಟ್ನಾಂ ಮತ್ತು ಚೀನಾದ ಕೆಲವು ಭಾಗಗಳಲ್ಲಿ ಕಂಡು ಬಂದಿದೆ.

ಕರ್ನಾಟಕದಲ್ಲಿ 2014 ಮತ್ತು 2017ರಲ್ಲಿ ನಡೆಸಲಾಗಿರುವ ಪರೀಕ್ಷೆಯ ಪ್ರಕಾರ, ಕರ್ನಾಟಕದ ಇಬ್ಬರಿಗೆ ಒಂದು ಹಂತದಲ್ಲಿ ಕ್ಯಾಟ್ ಕ್ಯೂ ವೈರಸ್‌ ತಗಲಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಇದಕ್ಕೆ ಪ್ರತಿಕಾಯ (CQV IgG antibodies) ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಪುಣೆಯಲ್ಲಿರುವ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆ (ಎನ್‌ಐವಿ)ಯ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ, ವಿವಿಧ ರಾಜ್ಯಗಳಲ್ಲಿ ನಡೆಸಲಾಗಿರುವ 883 ಜನರ ರಕ್ತದ ಮಾದರಿಗಳ ಪರೀಕ್ಷೆಯ ಪೈಕಿ ಇಬ್ಬರಲ್ಲಿ ಹೊಸ ಸೋಂಕು ದೃಢಪಟ್ಟಿದೆ.

Edited By : Vijay Kumar
PublicNext

PublicNext

29/09/2020 03:06 pm

Cinque Terre

35.26 K

Cinque Terre

2