ಜಕಾರ್ತಾ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಿದ್ದರೂ ಅನೇಕರು ಮಾಸ್ಕ್ ಧರಿಸದೆ, ಸ್ಯಾನಿಟೈಜರ್ ಪರಿವಿಲ್ಲದೆ ತಿರುಗಾಡುತ್ತಿದ್ದಾರೆ. ಇದನ್ನ ತಡೆಯಲು ಕರ್ನಾಟಕ ಸರ್ಕಾರ ಒಂದು ಸಾವಿರ ದಂಡ ವಿಧಿಸಿದರೂ ಸಾರ್ವಜನಿಕರು ಕ್ಯಾರೆ ಎನ್ನುತ್ತಿಲ್ಲ. ಆದರೆ ಇಂಡೋನೇಷ್ಯಾದ ಒಂದು ಪ್ರದೇಶದಲ್ಲಿ ಮಾಸ್ಕ್ ಧರಿಸದೆ ತಿರುಗಾಡುವವರಿಗೆ ಭರ್ಜರಿ ಬಿಸಿ ಮುಟ್ಟಿಸಲಾಗಿದೆ.
ಹೌದು. ಜಾವಾ ದ್ವೀಪದಲ್ಲಿ ಇಂಥದ್ದೊಂದು ಶಿಕ್ಷೆಯನ್ನ ಜಾರಿ ಮಾಡಲಾಗಿದೆ. ಮಾಸ್ಕ್ ಧರಿಸದೆ ತಿರುಗಾಡುವ ವ್ಯಕ್ತಿಗಳು ಸ್ಮಶಾನದಲ್ಲಿ ಮಣ್ಣು ಅಗೆಯುವ ಕೆಲಸ ಮಾಡಬೇಕು ಎಂದು ಸ್ಥಳೀಯ ಅಧಿಕಾರಿ ಆದೇಶಿಸಿದ್ದಾರೆ. ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ಫೇಸ್ ಮಾಸ್ಕ್ ಹಾಕಲು ನಿರಾಕರಿಸಿದ ಎಂಟು ಮಂದಿಯನ್ನು ಸ್ಮಶಾನಕ್ಕೆ ಕರೆದೊಯ್ದು, ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಸಮಾಧಿಗೆ ಮಣ್ಣು ಅಗೆಸಲಾಯಿತು ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
PublicNext
06/10/2020 10:42 pm