ಬೆಂಗಳೂರು: ಕೋವಿಡ್ ಅಪಾಯದ ಭತ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ 'ಕರ್ನಾಟಕ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್' ಸಂಘಟನೆ ವೈದ್ಯರು ಹೊರ ರೋಗಿಗಳ ಸೇವೆ ಬಂದ್ ಮಾಡಿ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸುತ್ತಿದ್ದಾರೆ.
"ಈ ಧರಣಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯ ಆಸ್ಪತ್ರೆಗಳ ತುರ್ತು ಸೇವೆ ಹೊರತು ಪಡಿಸಿ ಒಪಿಡಿ ಬಂದ್ ಮಾಡಿದ್ದೇವೆ. ನ.14 ರಂದು ಸಚಿವ ಸುಧಾಕರ್ ನಮ್ಮ ಬೇಡಿಕೆಗಳನ್ನು 10 ದಿನದಲ್ಲಿ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇನ್ನೂ ಆಗಿಲ್ಲ. ಹೀಗಾಗಿ ಬೇಡಿಕೆ ಈಡೇರದಿದ್ದರೇ ತುರ್ತು ಸೇವೆ ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತೆ" ಎಂದು ಎಚ್ಚರಿಕೆ ನೀಡಿದ್ದಾರೆ.
* ಬೇಡಿಕೆಗಳು: 2018-19ರ ಸಾಲಿನ ಶೈಕ್ಷಣಿಕ ಶುಲ್ಕ ಪರಿಷ್ಕರಣೆ. ಕೋವಿಡ್ ಅಪಾಯದ ಭತ್ಯೆ ತಕ್ಷಣ ಬಿಡುಗಡೆ ಮಾಡಬೇಕು.
ನೀಟ್ ಪಿಜಿ ಕೌನ್ಸೆಲಿಂಗ್ ತ್ವರಿತವಾಗಿ ಆರಂಭಿಸಬೇಕು.
PublicNext
01/12/2021 08:33 am