ಕೊರೊನಾ ಜೊತೆಗೆ ಬ್ರಿಟನ್ ಭೂತದಿಂದ ಜನರ ರಕ್ಷಣೆಗಾಗಿ ಸರ್ಕಾರ ಎಲ್ಲೆಡೆ ನೈಟ್ ಕರ್ಫ್ಯೂ ಸೇರಿದಂತೆ ವಿವಿಧ ಟಫ್ ರೂಲ್ಸ್ ಜಾರಿ ಮಾಡುತ್ತಿದೆ.
ಆದ್ರೆ ಜನ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಖತ್ ಮೋಜು ಮಸ್ತಿ ಮಾಡುತ್ತಿದ್ದಾರೆ.
ಇತ್ತ ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿ ಬೀಚ್ ನಲ್ಲಿ ಮಸ್ತಿ ಮಾಡುತ್ತಿದ್ದಾರೆ.
ಕೇವಲ ಯುವಕ ಯುವತಿಯರು ಮಾತ್ರವಲ್ಲ ಕುಟುಂಬದ ಜೊತೆ ಆಗಮಿಸಿರುವ ಪ್ರವಾಸಿಗರು ಬೀಚ್ ನಲ್ಲಿ ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ.
ಇವರ ಎಂಜಾಯ್ ಮೆಂಟ್ ನೋಡಿದ್ರೆ ಕೊರೊನಾ ಇದೆಯೇ? ಎನ್ನುವ ಪ್ರಶ್ನೆ ಮೂಡುವಂತಿದೆ.
ಅದೇನೆ ಆಗ್ಲಿ ಹೊಸ ವರ್ಷಾಚರಣೆ ಜೊತೆಗೆ ಕೇಂದ್ರ ಆರೋಗ್ಯ ಇಲಾಖೆ ಜಾರಿ ಮಾಡಿರುವ ಗೈಡ್ ಲೈನ್ಸ್ ಗೆ ಜನ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
PublicNext
31/12/2020 03:58 pm