ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

EMI ವಿನಾಯ್ತಿ ಪಡೆಯದವರನ್ನು ಕೈ ಬಿಡದ ಕೇಂದ್ರ ಸರ್ಕಾರ ಕೊಟ್ಟ ಸಿಹಿ ಸುದ್ದಿ ಏನು?

ಮುಂಬೈ : ವಿಶ್ವಕ್ಕೆ ಕಂಟಕವಾದ ಡೆಡ್ಲಿ ಸೋಂಕು ಹರಡುವಿಕೆಯಿಂದಾಗಿ ಜಗತ್ತಿನಲ್ಲಿ ಸಾಕಷ್ಟು ಅಲ್ಲೋಲಕಲ್ಲೋಲಗಳು ಸೃಷ್ಠಿಯಾದವು.

ಜನಜೀವನ ಅಸ್ಥವ್ಯಸ್ಥವಾಯಿತು ಆ ವೇಳ ಸರ್ಕಾರ ಜನಪರ ಹಲವಾರು ಯೋಜನೆಗಳನ್ನು ಜಾರಿ ಮಾಡಿತು.

ಕೊರೊನಾ ವಿಷಮ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಲವು ವಿನಾಯಿಯನ್ನು ನೀಡಿದೆ.

ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, 2 ಕೋಟಿ ರು.ಗಿಂತ ಕಡಿಮೆ ಸಾಲ ಪಡೆದವರು ಆರು ತಿಂಗಳು ಇಎಂಐ ಮುಂದೂಡಿಕೆ ಸೌಲಭ್ಯ ಪಡೆದಿದ್ದರೆ ಆ ಅವಧಿಗೆ ಚಕ್ರಬಡ್ಡಿ ವಿಧಿಸುವುದಿಲ್ಲ ಎಂದು ಹೇಳಿತ್ತು.

ಈ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡರೆ, ಕಷ್ಟಪಟ್ಟು ಸಾಲದ ಕಂತು ಪಾವತಿಸಿದವರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಅವರಿಗೂ ಪರಿಹಾರ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಸಕಾಲಕ್ಕೆ ಇಎಂಐ ಪಾವತಿಸಿದವರಿಗೆ ಇನ್ನುಳಿದ ಸಾಲದ ಅವಧಿಗೆ ಪ್ರತಿ ತಿಂಗಳ ಇಎಂಐ ಮೊತ್ತವನ್ನೇ ಕೊಂಚ ಇಳಿಕೆ ಮಾಡುವ ಅಥವಾ ಒಟ್ಟಾರೆ ಇಎಂಐಗಳ ಸಂಖ್ಯೆಯನ್ನು ಕೊಂಚ ಕಡಿಮೆ ಮಾಡುವ ಸಾಧ್ಯತೆಯಿದೆ.

ಹೀಗೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಹೆಚ್ಚೆಂದರೆ 5000ದಿಂದ 7000 ಕೋಟಿ ರು. ಹೊರೆ ಬೀಳಬಹುದು ಎನ್ನಲಾಗಿದೆ.

ಆದರೆ, ಇಂತಹದ್ದೊಂದು ಕೊಡುಗೆಯನ್ನು ಸಾಲಗಾರರಿಗೆ ನೀಡಲು ಬ್ಯಾಂಕಿನ ಸಾಫ್ಟ್ ವೇರ್ ನಲ್ಲೇ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬ್ಯಾಂಕುಗಳು ಹೇಳಿವೆ.

Edited By : Nirmala Aralikatti
PublicNext

PublicNext

05/10/2020 11:12 am

Cinque Terre

45.94 K

Cinque Terre

5

ಸಂಬಂಧಿತ ಸುದ್ದಿ