ಬೆಂಗಳೂರು: ಡೆಡ್ಲಿ ಸೋಂಕು ಕೊರೊನಾ ಹತೋಟಿಗಾಗಿ ಮಾಸ್ಕ್ ಹಾಕದವರಿಗೆ ಬಾರಿ ಮೊತ್ತದ ದಂಡ ಹಾಕುತ್ತಿದ್ದ ಸರ್ಕಾರದ ಮಾನದಂಡದಲ್ಲಿ ಮೆಗಾ ಬದಲಾವಣೆಯಾಗಿದೆ.
ಹೌದು. ಮಾಸ್ಕ್ ಧರಿಸದವರಿಗೆ 1,000 ರೂ ದಂಡ ವಿಧಿಸಲು ಮುಂದಾಗಿದ್ದ ಸರ್ಕಾರದ ನಡೆಯನ್ನು ಸಾರ್ವಜನಿಕರು ತುಂಬಾ ಕಟುವಾಗಿ ಖಂಡಿಸಿದ್ದರು. ಕೊರೊನಾ ಸಂಕಷ್ಟದಿಂದ ಕಂಗೆಟ್ಟ ಜನಕ್ಕೆ ಬಾರಿ ಮೊತ್ತದ ದಂಡ ನುಂಗಲಾಗದ ತುತ್ತಾಗಿ ಪರಿಣಮಿಸಿತ್ತು.ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಕಡ್ಡಾಯ ಬಳಕೆ ಸ್ವಾಗತಾರ್ಹ ಇದನ್ನು ಎಲ್ಲರೂ ಪಾಲಿಸಲೇಬೇಕು.ಕೆಲವೊಬ್ಬರು ಕಾರಣಾಂತರಗಳಿಂದ ಮಾಸ್ಕ್ ಧರಿಸಿಲ್ಲವೆಂದು 1000 ರೂ ದಂಡ ವಿಧಿಸಿದಕ್ಕೆ ಜನ ಕಂಗಾಲಾಗಿ ಹೋಗಿದ್ದರು.
ಸದ್ಯ ಜನಾಕ್ರೋಶಕ್ಕೆ ಮಣಿದ ಸರ್ಕಾರ 1000 ರೂ. ನಿಂದ 250ಕ್ಕೆ ದಂಡದ ಮೊತ್ತವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ನಗರ ಪ್ರದೇಶದಲ್ಲಿ 250 ರೂಪಾಯಿ ದಂಡ ಮತ್ತು ಗ್ರಾಮೀಣ ಭಾಗದಲ್ಲಿ 100 ರೂಪಾಯಿ ದಂಡ ವಿಧಿಸಲು ಹೊಸ ಆದೇಶ ಹೊರಡಿಸಿದೆ.
PublicNext
07/10/2020 03:54 pm