ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ನಿಯಂತ್ರಣಕ್ಕೆ‌ ಸಿಲಿಕಾನ್ ಸಿಟಿಯಲ್ಲಿ ಸಿಂಗಾಪುರ ರೂಲ್ಸ್ ?

ಬೆಂಗಳೂರು: ಮಾಲ್, ಸಿನಿಮಾ‌‌ ಥಿಯೇಟರ್, ಜಾತ್ರೆ ಸೇರಿದಂತೆ ಜನ ಸೇರುವ ಪ್ರದೇಶಗಳಿಗೆ ತೆರಳ ಬೇಕಾದ್ರೆ 2ನೇ‌ ಡೋಸ್ ಲಸಿಕೆ ಕಡ್ಡಾಯ ಮಾಡುವ ಬಗ್ಗೆ ಬಿಬಿಎಂಪಿ ಗಂಭೀರವಾಗಿ ಚಿಂತನೆ ನಡೆಸಿದೆ.‌

ಈ ಕುರಿತು ಅಧಿಕಾರಿಗಳು ಸಭೆ ನಡೆಸಿದ್ದು, ಸಿಂಗಾಪುರದಲ್ಲಿ ಇರುವ ಕೋವಿಡ್ ನಿಯಮಗಳಲ್ಲಿನ ಕೆಲವೊಂದನ್ನು ನಗರದಲ್ಲಿ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಈ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸುಳಿವು ನೀಡಿದ್ದಾರೆ. ಈ ವಿಷಯ ಚರ್ಚೆ ಹಂತದಲ್ಲಿದೆ. ಕೆಲವೊಂದು ನಿಯಮಗಳನ್ನು ಕಠಿಣಗೊಳಿಸುವ ಅನಿವಾರ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮಕ್ಕಳನ್ನು ಮಾಲ್‌, ಸಿನಿಮಾ ಮಂದಿರ, ಟ್ರಿಪ್ ಗೆ ಕರೆದುಕೊಂಡು ಹೋಗದಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ಪೋಷಕರನ್ನು ಒತ್ತಾಯಿಸಿದೆ. ಕೋವಿಡ್ ಅಲೆ ಮತ್ತೆ ಉಲ್ಭಣಿಸುವ ಭೀತಿಯಿದ್ದು, ಶಾಲೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ತಿಳಿಸಿದೆ.

Edited By : Nagaraj Tulugeri
PublicNext

PublicNext

30/11/2021 11:39 am

Cinque Terre

26.94 K

Cinque Terre

0

ಸಂಬಂಧಿತ ಸುದ್ದಿ