ಬೆಂಗಳೂರು : ಪ್ರಯಾಣಿಕರೇ ಎಚ್ಚರ, ರಾತ್ರಿ 10 ಗಂಟೆಯೊಳಗೆ ಮನೆ ಕಡೆ ಮುಖಮಾಡಿ ಇಲ್ಲಾದ್ರೆ ನೀವು ಮನೆ ಸೇರುವುದು ಕಷ್ಟವಾದಿತು ಜೋಕೆ..
ಹೌದು ಬ್ರಿಟನ್ ಭೂತಕ್ಕೆ ಭಾರತ ನಡಗುತ್ತಿದೆ ಹೀಗಾಗಿ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು ಹೊಸ ರೂಪಾಂತರ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ (ಡಿ.23) ಜ.2ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಬಂದ್ ಆಗಲಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರವೂ ರಾತ್ರಿ 10ರ ಬಳಿಕ ಸ್ಥಗಿತಗೊಳ್ಳಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ ವೇಳೆ ಬಿಎಂಟಿಸಿ ಬಸ್ ಬಂದ್ ಆಗಲಿವೆ.
ಆದರೆ ರಾತ್ರಿ ವೇಳೆ ಸಂಚರಿಸುವ ಇತರ ಬಸ್ ಗಳು ರಾತ್ರಿ 10ರೊಳಗೆ ಬೆಂಗಳೂರು ಬಿಡಬೇಕು.
ಬೆಳಗ್ಗೆ 6 ಗಂಟೆಯೊಳಗೆ ನಿಗದಿತ ಸ್ಥಳ ತಲುಪುವಂತಿರಬೇಕು. ಸ್ವಲ್ಪ ಹೊತ್ತಿನಲ್ಲೇ ಮಾರ್ಗಸೂಚಿ ಕೈ ಸೇರಲಿದೆ. ಆ ನಂತರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಒಟ್ಟಿನಲ್ಲಿ ನ್ಯೂ ಇಯರ್ ಮತ್ತು ಕ್ರಿಸ್ ಮಸ್ ಆಚರಣೆಯ ಸಂಭ್ರಮದಲ್ಲಿದ್ದವರಿಗೆ ಬೀಗ್ ಬ್ರೇಕ್ ಬಿದ್ದಿದೆ.
PublicNext
23/12/2020 02:26 pm