ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ.1 ರಿಂದ ಗೋವಾದಲ್ಲಿ ಕ್ಯಾಸಿನೊಗಳು ಪುನರಾರಂಭ

ಪಣಜಿ: ಕೋವಿಡ್‌–19 ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಕ್ಯಾಸಿನೊಗಳನ್ನು ನವೆಂಬರ್ 1ರಿಂದ ಮತ್ತೆ ಆರಂಭಿಸಲು ಗೋವಾ ಸಚಿವ ಸಂಪುಟವು ಬುಧವಾರ ಒಪ್ಪಿಗೆ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಅವರು,‘ಕೊರೊನಾ ಮಾರ್ಗಸೂಚಿಗಳ ಅಡಿ ನವೆಂಬರ್ 1ರಿಂದ ಕ್ಯಾಸಿನೊಗಳನ್ನು ತೆರೆಯಲು ಅನುಮತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಕ್ಯಾಸಿನೊಗಳಲ್ಲಿ ಸಾಮರ್ಥ್ಯಕ್ಕಿಂತ ಶೇಕಡ 50 ರಷ್ಟು ಜನರು ಮಾತ್ರ ಇರಬೇಕು. ಅಲ್ಲದೆ ರಾಜ್ಯ ಗೃಹ ಇಲಾಖೆ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಅಷ್ಟೇ ಅಲ್ಲದೆ ಕ್ಯಾಸಿನೊಗಳು ಪುನಾರಂಭಕ್ಕೂ ಮುನ್ನ ಸರ್ಕಾರಕ್ಕೆ ಪರವಾನಗಿ ಶುಲ್ಕವನ್ನು ಪಾವತಿಸಬೇಕು’ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

28/10/2020 04:32 pm

Cinque Terre

53.26 K

Cinque Terre

0

ಸಂಬಂಧಿತ ಸುದ್ದಿ