ಮೈಸೂರು : ಕಲಬುರಗಿಯಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ವರ್ಗಾವಣೆಗೊಂಡ ಡಿಸಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲಬುರಗಿಯಿಂದ ಮೈಸೂರಿಗೆ ವರ್ಗಾವಣೆಯಾದ ತಿಂಗಳೊಳಗೆ ಮತ್ತೆ ವರ್ಗಾವಣೆ ಮಾಡಿ, ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ತಿಂಗಳು ಕಳೆಯುವುದರೊಳಗೆ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಶರತ್ ಅವರು ಸಿಎಟಿ ಮೊರೆ ಹೋಗಿದ್ದರು.
ಅರ್ಜಿ ಕೈಗೆತ್ತಿಕೊಂಡಿದ್ದ ಸಿಎಟಿ, ವಿಚಾರಣೆಯನ್ನು ಅ.7ರಂದು ನಿಗದಿಗೊಳಿಸಿ ಅ.14ಕ್ಕೆ ವಿಚಾರಣೆ ನಡೆಸಿತ್ತು. ತಾಂತ್ರಿಕ ಅಡಚಣೆ ಯಿಂದ ಅ.16ಕ್ಕೆ ಮತ್ತೆ ವಿಚಾರಣೆ ಮುಂದೂಡಿತ್ತು.
ಆನ್’ ಲೈನ್’ನಲ್ಲೇ ವಾದ ಪ್ರತಿವಾದವನ್ನು ಸಿಎಟಿ ಆಲಿಸಿತ್ತು. ಶರತ್ ಅವರನ್ನು ನಿಯಮ ಬಾಹಿರವಾಗಿ ವರ್ಗಾವಣೆ ಮಾಡ ಲಾಗಿದೆ.
ಎರಡು ವರ್ಷಗಳ ಕಾಲ ಕಡ್ಡಾಯ ಸೇವೆಯಲ್ಲಿ ಇರಬೇಕೆಂಬ ಸರ್ಕಾರದ ನಿಯಮ ವನ್ನು ಸರ್ಕಾರವೇ ಗಾಳಿಗೆ ತೂರಿದೆ ಎಂದು ಶರತ್ ಪರ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು.
ಪ್ರತಿವಾದ ಮಂಡಿಸಲು ಎಜಿ ಕಾಲಾವಕಾಶ ಕೇಳಿದ ಕಾರಣ ಸಿಎಟಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತ್ತು.
ಈ ನಡುವೆ ತಮ್ಮ ವರ್ಗಾವಣೆ ವಿಚಾರವಾಗಿ ಶರತ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೈಸೂರಿನ ತಮ್ಮ ನಿವಾಸದಲ್ಲಿ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ.
PublicNext
19/10/2020 01:00 pm