ಬಳ್ಳಾರಿ: ಎಸ್ಎಸ್ಎಲ್‌ಸಿ ಪರೀಕ್ಷಾ ಕರ್ತವ್ಯದ ವೇಳೆ ಶಿಕ್ಷಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಳ್ಳಾರಿ ನಗರದ ಬಸವೇಶ್ವರ ನಗರದ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಸಿ.ಎಸ್.ಮುಧೋಳ್ (59) ಮೃತ ಶಿಕ್ಷಕರಾಗಿದ್ದಾರೆ. ಇವರು ಬಳ್ಳಾರಿಯ ರಾಜ್ಯೋತ್ಸವ ನಗರದ ಎಸ್.ಎಂ.ವಿ.ವಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಳಗ್ಗೆ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದು, ಎಕ್ಸಾಂ ಬಳಿಕ ಮಧ್ಯಾಹ್ನ 1.50 ಸುಮಾರಿಗೆ ಶಾಲೆಯ ಆವರಣದಲ್ಲಿಯೇ ಹೃದಯಾಘಾತವಾಗಿದೆ. ಮೃತರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ. ಮಂಗಳವಾರ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
PublicNext
29/03/2022 03:59 pm