ಬೆಂಗಳೂರು: ಕೋವಿಡ್ ಕುಸಿತ ಕಂಡಿದೆ. ಇನ್ನೇನು ಮಾಸ್ಕ್ ಹಾಕಬೇಕಿಲ್ಲ. ಲಸಿಕೆ ತೆಗೆದುಕೊಳ್ಳಬೇಕಿಲ್ಲ ಅಂತಲೇ ಜನ ನಿರಾಳ ಆಗಿದ್ದರು. ಆದರೆ, ಕೇರಳ, ದೆಹಲಿ, ಉತ್ತರ ಪ್ರದೇಶದಲ್ಲಿ ಮತ್ತೆ ಕೋವಿಡ್ ಸೋಂಕು ಹೆಚ್ಚಾಗಿದೆ. ಇದರಿಂದ ಭೀತಿ ಹೆಚ್ಚಾಗುತ್ತಿದೆ. ಖಾಸಗಿ ಶಾಲೆಯ ಪ್ರವೇಶಾತಿ ಅಂತೂ ಶೇಕಡ-30 ರಷ್ಟು ಕುಸಿತ ಕಂಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲಾ ಆರಂಭದ ವೇಳಾ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಬರೋ ಮೇ-16 ರಿಂದ ಶಾಲೆಗಳು ಮತ್ತೆ ಆರಂಭಗೊಳ್ಳುತ್ತಿವೆ.
ಆದರೆ, ಕೊರೊನಾ ನಾಲ್ಕನೆ ಅಲೆಯ ಭೀತಿಯಿಂದಲೇ, 2022-23 ನೇ ಸಾಲಿನ ಪ್ರವೇಶಾತಿಯಲ್ಲಿ ಶೇಕಡ 20 ರಿಂದ 30 ರಷ್ಟು ಕುಸಿತ ಕಂಡಿದ್ದು, ಖಾಸಗಿ ಶಾಲೆಯಗಳು ಪ್ರವೇಶಾತಿಗೆ ಪರದಾಡುವಂತೆ ಆಗಿದೆ.
PublicNext
19/04/2022 05:48 pm