ನವದೆಹಲಿ: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾಗೆ ಮದ್ದಾಗಿರುವ ಕೋವಿಡ್ ಲಸಿಕೆ ಪಡೆಯಲು ಇನ್ನು ಅನೇಕರು ಹಿಂದೆಟು ಹಾಕುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಮನೆ ಮನೆಗೆ ಹೋಗಿ ವ್ಯಾಕ್ಸಿನ್ ನೀಡುತ್ತಿದ್ದರು ಜನ ವ್ಯಾಕ್ಸಿನ್ ಮಹತ್ವ ತಿಳಿಯುತ್ತಿಲ್ಲ.
ಸದ್ಯ ಪಂಜಾಬ್ ರಾಜ್ಯದಲ್ಲಿ ಸರ್ಕಾರಿ ನೌಕರರು ತಮ್ಮ ಲಸಿಕಾ ಪ್ರಮಾಣಪತ್ರವನ್ನು ನೀಡದಿದ್ದರೆ ಅವರಿಗೆ ಸಂಬಳವನ್ನು ನೀಡುವುದಿಲ್ಲ ಎಂದು ಪಂಜಾಬ್ ಸರ್ಕಾರ ಇಂದು ತಿಳಿಸಿದೆ. ಒಂದೇ ಡೋಸ್ ಲಸಿಕೆ ಪಡೆದವರಾಗಲಿ ಅಥವಾ ಎರಡು ಡೋಸ್ ಪಡೆದವರಾಗಲಿ ಪಂಜಾಬ್ ಸರ್ಕಾರದ ಉದ್ಯೋಗ ಪೋರ್ಟಲ್ ನಲ್ಲಿ ಅವರು ತಮ್ಮ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಅನ್ನು ಅಪ್ ಲೋಡ್ ಮಾಡಿದರೆ ಮಾತ್ರ ಸಂಬಳ ಪಡೆಯಬಹುದು.
ಲಸಿಕೆ ಹಾಕದ ನೌಕರರಿಗೆ ಏನು ಮಾಡಲು ಉದ್ದೇಶಿಸಿದೆ ಎಂಬುದನ್ನು ಸರ್ಕಾರದ ಆದೇಶವು ಸ್ಪಷ್ಟಪಡಿಸಿಲ್ಲ. ಜನರು ತಮ್ಮನ್ನು ಲಸಿಕೆ ಹಾಕಿಸಿಕೊಳ್ಳಲು ಪಂಜಾಬ್ ನ ಕಟ್ಟುನಿಟ್ಟಾದ ನೀತಿಯು ಹೆಚ್ಚು ಹರಡುವ ಕೊರೊನಾವೈರಸ್ ನ ಒಮಿಕ್ರಾನ್ ಸೋಂಕಿನ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಲು ಜನರಿಗೆ ಸೂಚಿಸುತ್ತಿದೆ.
PublicNext
22/12/2021 10:12 pm