ಮೈಸೂರು: ನಿರಂತರವಾಗಿ ತಲೆ ಕೂದಲು ಉದುರುತ್ತಿರುವುದರಿಂದ ಬೆಸತ್ತ ಯುವತಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಘವೇಂದ್ರ ನಗರ ಬಡಾವಣೆಯಲ್ಲಿ ಸಂಭವಿಸಿದೆ.
ಹೌದು 22 ವರ್ಷದ ಕಾವ್ಯಶ್ರೀ ಎಂಬ ಹಲವು ದಿನಗಳ ಹಿಂದೆ ಪತ್ಮಂಡೆ(ಕೂದಲು ಉದುರುವಿಕೆ) ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ. ತಲೆಯಲ್ಲಿ ಬಹುತೇಕ ಎಲ್ಲ ಕೂದಲೂ ಉದುರಿತ್ತು.ಇದೇ ವಿಚಾರಕ್ಕೆ ಮನನೊಂದ ಕಾವ್ಯಶ್ರೀ, ಕುಣಿಕೆಗೆ ಕೊರೊಳೊಡ್ಡಿದ್ದಾರೆ. ಈ ಕುರಿತು ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/07/2022 08:47 pm