ವರದಿ: ಗಣೇಶ್ ಹೆಗಡೆ
ಬೆಂಗಳೂರು: ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್ ಶವ ಕೊಳೆತ ಪ್ರಕರಣಕ್ಕೆ ಸಂಬಂಧಿಸಿ ಡೀನ್ ತಲೆದಂಡವಾಗಿದೆ. ಕೇಂದ್ರ ಕಾರ್ಮಿಕ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ರಾಜಾಜಿನಗರ ಆಸ್ಪತ್ರೆ ಡೀನ್ ಡಾ.ಜಿತೇಂದ್ರ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಡಾ.ರೇಣುಕಾ ರಾಮಯ್ಯ ಅವರನ್ನು ರಾಜಾಜಿನಗರ ಇಎಸ್ ಐ ಆಸ್ಪತ್ರೆ ಡೀನ್ ಹುದ್ದೆಗೆ ಹೊಸದಾಗಿ ನೇಮಕ ಮಾಡಲಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಈ ಬಗ್ಗೆ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದ್ದು, ಸಮಿತಿ ಸಮಗ್ರ ವಿಚಾರಣೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸಲಿದೆ ಎಂದು ತಿಳಿಸಿತ್ತು.
ನ.27ರಂದು ಬೆಳಗ್ಗೆ 10.30ಕ್ಕೆ ಹಳೆ ಶವಾಗಾರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಎರಡು ದೇಹಗಳು ಪತ್ತೆ ಆಗಿದ್ದವು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಮಹಜರು ಮಾಡಿದ್ದರು. ದುರ್ಗಾ ಹಾಗೂ ಮುನಿರಾಜು ಮೃತಪಟ್ಟವರಾಗಿದ್ದರು. ಆದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆಗಬೇಕೆಂಬ ಒತ್ತಾಯ ಸಂಬಂಧಿಕರದ್ದಾಗಿತ್ತು.
PublicNext
01/12/2021 10:13 pm