ಬೆಳಗಾವಿ : ಬೆಳಗಾವಿಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸದಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಜಿಲ್ಲಾಧಿಕಾರಿ ಡಾ.ಎಂ.ಜಿ.ಹಿರೇಮಠ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್ ಪರಿಶೀಲನೆ ನಡೆಸಿ ವರದಿ ಕೊಟ್ಟಿದ್ದಾರೆ. ಟೆಕ್ನಿಕಲ್ ವರದಿಯೂ ಇದೆ ಆದರೆ ಬಹಿರಂಗ ಪಡಿಸಲು ಆಗಲ್ಲ. ಆದರೆ ನಿರ್ಲಕ್ಷ್ಯ ತೋರಿದ ಆರೋಪದ ಸ್ಟಾಫ್ ನರ್ಸ್ ಹಾಗೂ ಫಾರ್ಮಸಿಸ್ಟ್ ಇಬ್ಬರು ಅಮಾನತಾಗಿದ್ದಾರೆ ಎಂದು ಹೇಳಿದರು.
ಇನ್ನೂ ಸಹ ಪ್ರಕರಣದ ತನಿಖೆ ಮುಂದುವರಿದಿದೆ. ವಯಲ್ ತಯಾರಿಸಿದ ಕಂಪನಿಗೆ ಲಸಿಕೆ ಮಾದರಿ ಕಳುಹಿಸಿಕೊಟ್ಟಿದ್ದೇವೆ. ಪ್ರಯೋಗಾಲಯಕ್ಕೂ ಸಹ ಆ ವಯಲ್ ಗಳನ್ನು ಕಳಿಸಿಕೊಟ್ಟಿದ್ದೇವೆ.ಆ ವರದಿ ಬಂದ ಮೇಲೆ ನಿಖರ ಕಾರಣ ಏನು ಗೊತ್ತಾಗಲಿದೆ ಎಂದರು.
ಇದೇ ವೇಳೆ ಮೃತ ಪಟ್ಟ ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರವಾಗಿ ಮಾತನಾಡಿ ಲಸಿಕಾಕರಣ ವೇಳೆ ಮೃತಪಟ್ಟ ಕಾರಣ ಪರಿಹಾರ ನೀಡಲು ಅವಕಾಶ ಇಲ್ಲ ಆದರೆ ಸಿಎಂ ಪರಿಹಾರ ನಿಧಿಯಲ್ಲಿ ಅವಕಾಶ ಇದೆ. ಅದಕ್ಕೆ ಕೆಲವು ಮಾನದಂಡಗಳಿವೆ ಅವರ ಆರ್ಥಿಕ ಸ್ಥಿತಿ ಹೇಗಿದೆ ನೋಡಿಕೊಳ್ಳುತ್ತೇವೆ. ಆ ಮಾನದಂಡಗಳೊಳಗೆ ಬಂದ್ರೆ ಜಂಟಿ ಕಾರ್ಯದರ್ಶಿಗೆ ಕಳಿಸಿಕೊಡುತ್ತೇವೆ ಎಂದರು.
ಇನ್ನು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳದ ವಿಚಾರವಾಗಿ ಮಾತನಾಡಿ ವೈದ್ಯಾಧಿಕಾರಿಗಳಿಗಿಂತಲೂ ಪ್ರಾಥಮಿಕವಾಗಿ ಇಬ್ಬರು ಸಿಬ್ಬಂದಿಯಿಂದ ತಪ್ಪಾಗಿದೆ. ವೈದ್ಯಾಧಿಕಾರಿಗಳು ಈ ರೀತಿ ಮಾಡಿ ಅಂತಾ ಗೈಡ್ ಮಾಡಿಲ್ಲ ಎಂದರು.
PublicNext
19/01/2022 12:50 pm