ನವದೆಹಲಿ : ವಿಶ್ವದಲ್ಲಿಯೇ ಕೊರೊನಾ ಎಂಬ ಮಹಾಮಾರಿ ಸೃಷ್ಠಿಸಿದ ಅವಾಂತರ ಒಂದೆರಡಲ್ಲ ಇದರ ಮಧ್ಯೆ ದೇಶದಲ್ಲಿ ಸೋಂಕಿನ ಪ್ರಮಾಣ ದಿನದಿಂನ ದಿನಕ್ಕೆ ಹೆಚ್ಚಾಗುತ್ತಿದೆ.
ಇನ್ನೂ ದೇಶದಲ್ಲಿ ಡೆಡ್ಲಿ ಹಾವಳಿ ಹೆಚ್ಚಾಗಿದ್ದು ದೆಹಲಿಯಲ್ಲಿ ಈ ವರ್ಷದ ಮಾರ್ಚ್ ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಕಾರ್ಯಕ್ರಮದ ನಂತರ.
ಈ ಕಾರ್ಯಕ್ರಮ 'ಹಲವರಿಗೆ' ಕೊರೊನಾ ಸೋಂಕು ಹರಡಲು ಕಾರಣವಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಗೃಹ ಖಾತೆ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಮಾರ್ಚ್ 29ರ ನಂತರ ದೆಹಲಿ ಪೊಲೀಸರು 233 ತಬ್ಲೀಗಿ ಜಮಾತ್ ಸದಸ್ಯರನ್ನು ಬಂಧಿಸಿ, 2,631 ಜನರನ್ನು ತೆರವು ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಅವರ ವಿರುದ್ಧ ತನಿಖೆಯು ಪ್ರಗತಿಯಲ್ಲಿದೆ.
ದೆಹಲಿ ಪೊಲೀಸರು ಹೇಳಿರುವಂತೆ, ಕೋವಿಡ್ ಕುರಿತಾದ ನಿರ್ಬಂಧ ವಿಧಿಸಲಾಗಿದ್ದರೂ ಸಮಾವೇಶ ನಡೆಸಲಾಗಿತ್ತು.
ಅಲ್ಲಿ ಕೊರೊನಾ ಮುಂಜಾಗೃತ ಕ್ರಮ ಕೈಗೊಂಡಿರಲಿಲ್ಲ ಇದರಿಂದಾಗಿಯೇ ಹಲವರಿಗೆ ಸೋಂಕು ಹರಡಲು ಕಾರಣವಾಯಿತು ಎಂದಿದ್ದಾರೆ.
PublicNext
21/09/2020 01:51 pm