ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

4 ಮಕ್ಕಳಿಗೆ ಜನ್ಮವಿತ್ತ ಕೊರೊನಾ ಸೋಂಕಿತೆ!

ಲಕ್ನೋ: ಕೊರೊನಾ ಸೋಂಕಿತೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಗೋರಖ್​ಪುರ ಜಿಲ್ಲೆಯ ಬಿಆರ್​ಡಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ್ ಕುಮಾರ್, 'ತುಂಬು ಗರ್ಭಿಣಿಯಾಗಿದ್ದ ಡಿಯೋರಿಯಾ ಜಿಲ್ಲೆಯ ಗೌರಿ ಬಜಾರ್ ನಿವಾಸಿ 26 ವರ್ಷದ ಮಹಿಳೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಮಂಗಳವಾರ ರಾತ್ರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಕೋವಿಡ್ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಲ್ಲಿಯೇ ಕೊರೊನಾ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ನಾಲ್ಕೂ ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಸದ್ಯ ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ನಾಲ್ಕು ಶಿಶುಗಳ ತೂಕ 980 ಗ್ರಾಂನಿಂದ 1.5 ಕೆಜಿ ನಡುವೆ ಇದೆ' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

25/09/2020 05:02 pm

Cinque Terre

46.5 K

Cinque Terre

0