ಯಾದಗಿರಿ: ಎಲ್ಲೇಡೆ ಕೊರೊನಾ ರಣಕೇಕೆ ಹಾಕುತ್ತಿದೆ ಸಿಕ್ಕಸಿಕ್ಕವರನ್ನು ಭಕ್ಷಿಸುತ್ತಿದೆ.
ಇದರ ಮಧ್ಯೆ ಸರ್ಕಾರವು ಸಾಕಷ್ಟು ಆರೋಗ್ಯ ಜಾಗೃತಿಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಿದರು ಜನ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.
ಮಾಸ್ಕ್ ಹಾಕೊಳ್ಳಿ ಅಂದ್ರು ಹಾಗೆ ಸುತ್ತಾಡುವವರ ಮೈ ಚಳಿ ಬಿಡಿಸಿದ ಲೇಡಿ ಅಧಿಕಾರಿ ಸಕ್ಕತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಾಸ್ಕ್ ಧರಿಸದೆ ತಿರುಗುತ್ತಿರುವವರಿಗೆ ಅಧಿಕಾರಿಗಳು ದಂಡ ಹಾಕುವ ಮೂಲಕ ಬುದ್ಧಿ ಕಲಿಸುತ್ತಿದ್ದಾರೆ.
ಅದೇ ರೀತಿ ನಗರದಲ್ಲಿ ಸಹ ಮಾಸ್ಕ್ ಧರಿಸದ ಪುಂಡರಿಗೆ ಲೇಡಿ ಅಧಿಕಾರಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸಹ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಜನ ಮಾತ್ರ ನಿಯಮ ಪಾಲಿಸುತ್ತಿಲ್ಲ.
ಹೀಗಾಗಿ ಅಧಿಕಾರಿಗಳು ರಸ್ತೆಗಿಳಿದು ದಂಡ ಹಾಕಲು ಆರಂಭಿಸಿದ್ದಾರೆ.
ಇಂದು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುಂಡರಿಗೆ ಲೇಡಿ ಅಧಿಕಾರಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಾಸ್ಕ್ ಧರಿಸುವಂತೆ ಯುವಕನಿಗೆ ತಿಳಿಸಿದರೆ, ಅಧಿಕಾರಿಗಳ ಮಾತಿಗೆ ಉದ್ಧಟತನ ತೋರಿದ್ದ.
ಈ ವೇಳೆ ಫುಲ್ ಅವಾಜ್ ಹಾಕಿದ ಶರಣಮ್ಮ, ಮಾಸ್ಕ್ ಧರಿಸು ಇಲ್ಲವೇ ಪೊಲೀಸ್ ಠಾಣೆಗೆ ನಡೆ ಎಂದು ಎಚ್ಚರಿಸಿದ್ದಾರೆ.
ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದ ಬೇಕರಿ ಮಾಲೀಕನಿಗೆ ಸಹ ಇದೇ ರೀತಿ ಕ್ಲಾಸ್ ತೆಗೆದುಕೊಂಡಿದ್ದಾರೆ.
PublicNext
02/10/2020 10:34 pm