ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​ಗೆ ಕೊರೊನಾ ದೃಢ

ಕೋಲ್ಕತ್ತಾ: ಅರ್ಥಶಾಸ್ತ್ರಜ್ಞದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾಗಿರುವ ಅಮರ್ತ್ಯ ಸೇನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಮ್ಮ ಪೂರ್ವಜರ ಮನೆಯಲ್ಲಿ ತಂಗಿದ್ದ ಅಮರ್ತ್ಯ ಸೇನ್​ ಅವರಿಗೆ ಕೋವಿಡ್​ ಸೌಮ್ಯ ರೋಗಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್​ನಿಂದಾಗಿ ಸತತ ಎರಡು ವರ್ಷಗಳ ಕಾಲ ಅವರು ತಮ್ಮ ಪೂರ್ವಜರ ಮನೆಗೆ ಭೇಟಿ ಕೊಟ್ಟಿರಲಿಲ್ಲ. ಹೀಗಾಗಿ ಜುಲೈ 1 ರಂದು ಶಾಂತಿನಿಕೇತನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿ ಅಲ್ಲಿಯೇ ತಂಗಿದ್ದರು. 88 ವರ್ಷದ ಸೇನ್​ ಅವರಿಗೆ ಸೋಂಕು ತಗುಲಿದೆ.

ಸೇನ್​ ಅವರು ಇಂದು ತಮ್ಮ ನಿವಾಸದಿಂದಲೇ ಕೋಲ್ಕತ್ತಾದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ವರ್ಜುವಲ್​ ಆಗಿ ಪಾಲ್ಗೊಳ್ಳಬೇಕಿತ್ತು. ಅಷ್ಟೇ ಅಲ್ಲ, ಪ್ರೊಫೆಸರ್ ಸೇನ್ ಜುಲೈ 10ರಂದು ಲಂಡನ್‌ಗೆ ತೆರಳಬೇಕಾಗಿತ್ತು. ಆದರೆ ಪರಿಸ್ಥಿತಿ ಹಠಾತ್ ಬದಲಾವಣೆಯಿಂದ ಅವರ ಎಲ್ಲಾ ಪ್ರಯಾಣದ ಯೋಜನೆಗಳನ್ನು ನಿಲ್ಲಸಲಾಗಿದೆ. ವೈದ್ಯರು ನಿತ್ಯ ಅವರ ಮನೆಗೆ ಭೇಟಿ ನೀಡುತ್ತಿದ್ದು, ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

Edited By : Vijay Kumar
PublicNext

PublicNext

09/07/2022 03:05 pm

Cinque Terre

20.05 K

Cinque Terre

0