ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಕ್ಕಿನಿಂದ ಅಪ್ಪ ಮಗನಿಗೆ ಕೋವಿಡ್ ಪಾಸಿಟಿವ್ ಬೆಳಕಿಗೆ ಬಂದ ಅಪರೂಪದ ಘಟನೆ.!

ವಿಶ್ವಕ್ಕೆ ಮಾರಕವಾಗಿದ್ದ ಕೋವಿಡ್‌ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳುವ ಹೊತ್ತಲ್ಲಿ ಮತ್ತೆ ಕೆಲ ದೇಶಗಳಲ್ಲಿ ಮಹಾಮಾರಿ ತಲೆ ಎತ್ತುತ್ತಿದೆ. ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಹೆಚ್ಚಾಗತೊಡಗಿದೆ. ಜೂನ್ 29ರಂದು ಬಿಡುಗಡೆಯಾಗಿರುವ ವಿಜ್ಞಾನ ನಿಯತಕಾಲಿಕೆ ನೇಚರ್ ವರದಿ ಪ್ರಕಾರ ಥೈಲ್ಯಾಂಡ್‌ನಲ್ಲಿ ಬೆಕ್ಕಿನಿಂದ ಸೋಂಕು ಹರಡಿರುವ ಅಪರೂಪದ ಪ್ರಕರಣ ನಡೆದಿದೆ.

ಸದ್ಯ ಥೈಲ್ಯಾಂಡ್‌ನ ಪ್ರಿನ್ಸ್ ಆಫ್ ಸೊಂಗ್ಕ್ಲಾ ಯೂನಿವರ್ಸಿಟಿಯ ಸಾಂಕ್ರಾಮಿಕ ರೋಗಗಳ ಸಂಶೋಧಕ ಸರುನ್ಯು ಚುಸ್ರಿ ಅವರು ನಡೆಸಿದ ಅಧ್ಯಯನದ ಪ್ರಕಾರ, ಆಗಸ್ಟ್ ನಲ್ಲಿ ತಂದೆ -ಮಗನಿಗೆ SARS-CoV-2 ಸೋಂಕು ಹರಡಿರುವುದು ದೃಢಪಟ್ಟಿದ್ದು, ಅವರನ್ನು ಐಸೋಲೇಶನ್ ನಲ್ಲಿಡಲಾಗಿತ್ತು.

ಆಶ್ಚರ್ಯದ ವಿಚಾರವೆಂದರೆ ಅವರು ಸಾಕಿದ ಬೆಕ್ಕನ್ನು ಪರೀಕ್ಷಿಸಿದಾಗ ಪಾಸಿಟಿವ್ ಬಂದಿತ್ತು.

ಮನೆಯಲ್ಲಿ ಆಗಾಗ ಬೆಕ್ಕು ಸೀನುತ್ತಿತ್ತು. ಮೂರ್ನಾಲ್ಕು ದಿನಗಳವರೆಗೆ ಕೆಮ್ಮು, ಜ್ವರ ಮತ್ತು ಸೀನುತ್ತಿದ್ದುದನ್ನು ಗಮನಿಸಿ ಪರೀಕ್ಷಿಸಿದಾಗ ಅದಕ್ಕೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ವೈದ್ಯರು ಮಾಸ್ಕ್ ಹಾಕದೇ ಈ ಬೆಕ್ಕನ್ನು ಪರೀಕ್ಷಿಸುವ ವೇಳೆಯಲ್ಲಿ ಅದು ಸೀನಿದೆ. ಆದರೆ, ವೈದ್ಯರಿಗೆ ಯಾವುದೇ ರೀತಿಯ ಸೋಂಕು ಹರಡಿಲ್ಲ. ಹೀಗಾಗಿ ತಂದೆ - ಮಗನಿಗೆ ಬೆಕ್ಕಿನಿಂದ ಸೋಂಕು ಹರಡಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.

Edited By : Vijay Kumar
PublicNext

PublicNext

01/07/2022 05:49 pm

Cinque Terre

22 K

Cinque Terre

0