ದಾವೋಸ್:ಭಾರತದ ಕೋವಿಡ್ ಲಸಿಕಾ ಅಭಿಯಾನವನ್ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮನಸಾರೆ ಕೊಂಡಾಡಿದ್ದಾರೆ. ಇಲ್ಲಿ ನಡೆದ ಆ ಅಭಿಯಾನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಬಿಲ್ ಗೇಟ್ಸ್ ಈ ಮಾತನ್ನ ಹೇಳಿದ್ದು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ನಡೆದ ಸಭೆಯಲ್ಲಿಯೇ ಬಿಲ್ ಗೇಟ್ಸ್ ಭಾರತದ ಕೋವಿಡ್ ಲಸಿಕಾ ಅಭಿಯಾನವನ್ನ ಶ್ಲಾಘಿಸಿದ್ದಾರೆ.
ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ ಭಾರತ ಯಶಸ್ಸು ಕಂಡಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸುವ ಮೂಲಕ ಪ್ರಪಂಚಕ್ಕೆ ಅನೇಕ ಪಾಠಗಳನ್ನೂ ಭಾರತ ನೀಡುತ್ತಿದೆ ಅಂತಳೂ ಬಿಲ್ ಗೇಟ್ಸ್ ಕೊಂಡಾಡಿದ್ದಾರೆ.
PublicNext
29/05/2022 02:54 pm