ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓಮಿಕ್ರಾನ್ ಸೋಂಕಿತ ಯುವತಿ ಗುಣಮುಖ

ಚೆನ್ನೈ: ಕೊರೊನಾ ರೂಪಾಂತರ ವೈರಸ್ ಓಮಿಕ್ರಾನ್ ಬಿಎ.4 ಸೋಂಕಿಗೆ ಒಳಗಾಗಿದ್ದ ತಮಿಳುನಾಡಿದ 19 ವರ್ಷದ ಯುವತಿ ಈಗ ಸೋಂಕಿನಿಂದ ಗುಣಮುಖಳಾಗಿದ್ದಾಳೆ. ತಮಿಳುನಾಡು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಈ ಕುರಿತು ಮಾಹಿತಿ ನೀಡಿದ್ದು,ಇದು ತಮಿಳುನಾಡಿನ ಪ್ರಥಮ ಓಮಿಕ್ರಾನ್ ಬಿಎ.4 ಸೋಂಕು ಪ್ರಕರಣವಾಗಿತ್ತು ಎಂದು ಹೇಳಿದ್ದಾರೆ.

ಯುವತಿಯಿಂದ ಆಕೆಯ ತಾಯಿ ಕೂಡಾ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆದರೆ ಪರೀಕ್ಷೆಯಲ್ಲಿ ಅವರು ಓಮಿಕ್ರಾನ್ ಬಿಎ.2 ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿತ್ತು. ತಾಯಿ ಮಗಳು ಇಬ್ಬರೂ ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆದು ಗುಣವಾಗಿದ್ದಾರೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

24/05/2022 02:56 pm

Cinque Terre

17.37 K

Cinque Terre

0