ನವದೆಹಲಿ: ಭಾರತದಲ್ಲಿ ಕೋವಿಡ್ ಅಟ್ಟಹಾಸಕ್ಕೆ 4.7 ಮಿಲಿಯನ್ ಸಾವು ಆಗಿದೆ. ಹೀಗಂತ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಆದರೆ, ಭಾರತ ಈ ಒಂದು ವರದಿಯಿಂದ ಕಿಡಿಕಾರಿದೆ. ಸುಳ್ಳು ವರದಿಯನ್ನ ಕೊಡಲೇಬೇಡಿ ಅಂತಲೂ ಗದರಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಈ ಒಂದು ವರದಿಯನ್ನೇ ಭಾರತ ಈಗ ಪ್ರಶ್ನಿಸಿದೆ. ಸಾವುಗಳ ಲೆಕ್ಕ ಇಡಲು ಬಳಸಿದ ಮಾದರಿಗಳ ಸಿಂಧುತ್ವ,ದೃಢತೆ, ಹಾಗೂ ಡೇಟಾ ಸಂಗ್ರಹದ ವಿಧಾನವನ್ನೇ ಪ್ರಶ್ನಾರ್ಹವಾಗಿದೆ ಅಂತಲೇ ಭಾರತ ಹೇಳಿದೆ.
WHO ವರದಿಯ ಪ್ರಕಾರ ಜನವರಿ 1 ರಿಂದ 2020 ಮತ್ತು ಡಿಸೆಂಬರ್-31.2021 ರ ಮಧ್ಯೆ ಅತಿ ಹೆಚ್ಚು ಕೋವಿಡ್ ಸಾವು ಆಗಿದೆ ಅಂತಲೇ ಹೇಳಿದೆ. ಇದರ ಸರಾಸರಿ ಲೆಕ್ಕ 14.9 ಮಿಲಿಯನ್ ಆಗಿದೆ ಅಂತಲೇ ವರದಿ ಮಾಡಿದೆ. ಆದರೆ, ಭಾರತ ಈ ವರದಿಯನ್ನ ಸಾರಾಸಗಟಾಗಿಯೇ ತಿಳ್ಳಿಹಾಕಿದೆ.
PublicNext
06/05/2022 04:59 pm