ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲೀಗ ಕೋವಿಡ್ 19,500 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಕೋವಿಡ್ ತಾಂಡವ ಆಡಲು ಶುರು ಮಾಡಿದೆ. ಇನ್ನೇನು ಕೋವಿಡ್ ಸತ್ತೇ ಹೋಯಿತು ಅನ್ನೋ ಹೊತ್ತಿಗೆ ಇದರ ಅಟ್ಟಹಾಸ ಮತ್ತೆ ಜೋರಾಗುತ್ತಿದೆ. ಭಾರತದ ಒಟ್ಟು ಈಗಿನ ಲೆಕ್ಕ ತೆಗರೆದುಕೊಂಡ್ರೆ, 19,500 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಕೋವಿಡ್ ಹೊಸ ಕೇಸ್‌ಗಳೂ ಶರವೇಗದಲ್ಲಿಯೇ ದಾಖಲಾಗುತ್ತಿವೆ. 24 ಗಂಟೆಯಲ್ಲಿ 3,157 ಪ್ರಕರಣಗಳು ದಾಖಲಾಗಿದ್ದು, ಇದೇ 24 ಗಂಟೆಯಲ್ಲಿ 40 ಜನ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಇಲ್ಲಿವರೆಗೂ ಮೃತಪಟ್ಟವರ ಸಂಖ್ಯೆ 5,23,843 ಆಗಿದೆ.

ದೆಹಲಿಯಲ್ಲಿ ನಿನ್ನೆ ಭಾನುವಾರ 1,485 ಕೊರೊನಾ ಕೇಸ್ ದಾಖಲಾಗಿವೆ. ಆದರೆ, ಸಾವು ನೋವು ಸಂಭವಿಸಿಲ್ಲ.ಇಲ್ಲಿ ಪಾಸಿಟಿವಿಟಿ ರೇಟ್ 4.89 ದಾಖಲಾಗಿದೆ.

Edited By :
PublicNext

PublicNext

02/05/2022 12:15 pm

Cinque Terre

40.28 K

Cinque Terre

3