ಬೆಂಗಳೂರು: ಭಾರತ ದೇಶಕ್ಕೆ ಕೊರೊನಾ ನಾಲ್ಕನೆ ಅಲೆ ಅಪ್ಪಳಿಸಿದೆ. ಇದನ್ನ ನಾವ್ ಹೇಳ್ತಿಲ್ಲ. ತಜ್ಞ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ.
ಹೌದು. ದಿನೇ ದಿನೇ ಕೊರೊನಾ ಕೇಸ್ ಹೆಚ್ಚುತ್ತಿದೆ. ಇವುಗಳ ನಡುವೆ ಹೊಸ ತಳಿಗಳ ಹಾವಳಿನು ಶುರು ಆಗಿದೆ. BA.2.10 ಹಾಗೂ BA.2.12 ಪತ್ತೆ ಆಗಿವೆ ಅಂತಲೂ ಜಯದೇವ ಆಸ್ಪತ್ರೆಯ ನಿರ್ದೇಶಕ ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಈ ಎರಡೂ ರೂಪಾಂತರಿ ತಳಿಗಳು ದೆಹಲಿ ಮತ್ತು ಕೇರಳದಲ್ಲಿ ಕಾಣಿಸಿಕೊಂಡಿದ್ದವು. ಆದರೆ ಈಗ ಈ ತಳಿ ಬೆಂಗಳೂರಿನಲ್ಲೂ ಕಾಣಿಸಿಕೊಂಡಿವೆ. ಜನ ಎಚ್ಚರಿಕೆಯಿಂದಲೇ ಇರಬೇಕಿದೆ. ಈಗಾಗಲೇ ನಾಲ್ಕನೆ ಅಲೆ ಶುರು ಆಗಿದೆ ಅಂತಳೂ ಹೇಳಿದ್ದಾರೆ ಡಾಕ್ಟರ್ ಸಿ.ಎನ್.ಮಂಜುನಾಥ್.
PublicNext
23/04/2022 04:10 pm