ದೆಹಲಿ: ಭಾರತ ದೇಶದಲ್ಲಿ ಕೊರೊನಾ ನಾಲ್ಕನೆ ಅಲೆ ಭೀತಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲಿಯೇ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ.
ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1,009 ಮಂದಿಗೆ ಕೊರೊನಾ ಸೋಂಕು ತಗುಲಿರೋದು ಪತ್ತೆ ಆಗಿದೆ. ಕೊರೊನಾ ಸೋಂಕಿಗೆ ಒಬ್ಬ ಬಲಿ ಕೂಡ ಆಗಿದ್ದಾನೆ.
ಫೆಬ್ರವರಿ ಬಳಿಕ ಇಲ್ಲಿ ಇಷ್ಟು ಪ್ರಮಾಣದಲ್ಲಿ ಕೊರೊನಾ ಕೇಸ್ ಮತ್ತೆ ಆಗಿವೆ. ಇದು ನಿಜಕ್ಕೂ ಆತಂಕಕಾರಿ ವಿಷಯವೇ ಆಗಿದೆ. ಸದ್ಯ ಇಲ್ಲಿ 5.7 ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಮತ್ತಷ್ಟು ಜಾಸ್ತಿ ಆಗೋ ಸಾಧ್ಯತೆನೂ ಹೆಚ್ಚಿದೆ.
PublicNext
21/04/2022 04:26 pm