ತಮಿಳುನಾಡು: ಕೊರೊನಾ ಹಾವಳಿ ಬಹುತೇಕ ಎಲ್ಲೆಡೆ ತಗ್ಗಿದೆ.ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಎಲ್ಲ ಕೋವಿಡ್ ನಿಯಮಗಳನ್ನ ತೆಗೆದು ಹಾಕಿದೆ. ಸಾರ್ವಜನಿಕ ಸ್ಥಳಕ್ಕೆ ಜನ ಇನ್ಮುಂದೆ ಯಾವುದೇ ಲಸಿಕೆ ಹಾಕಿಸಿಕೊಳ್ಳದೇನೆ ಭೇಟಿ ಕೊಡಬಹುದು ಅಂತಲೂ ಹೇಳಿದೆ.
ತಮಿಳುನಾಡಿನ ಜನ ಲಸಿಕೆ ಹಾಕಿಸಿಕೊಳ್ಳದೇನೆ ತಮಗೆ ಇಷ್ಟವಾದ ಜಾಗಕ್ಕೆ ತೆರಳ ಬಹುದು. 'ಲಸಿಕೆ ಕಡ್ಡಾಯ'ದ ನಿಯಮವನ್ನ ಸರ್ಕಾರ ಇಲ್ಲಿ ಹಿಂದಕ್ಕೆ ಪಡೆದಿದೆ.
ಆದರೆ, ಸಾಮಾಜಿ ಅಂತರ ಮತ್ತು ಮಾಸ್ಕ್ ಧರಿಸೋದು,ಕೈ ತೊಳೆದುಕೊಳ್ಳುವುದನ್ನ ಎಂದಿನಂತೆ ಮುಂದುವರೆಸಲು ಸಲಹೆ ನೀಡಿದೆ. ಅಲ್ಲಿಗೆ ಇಲ್ಲಿಯ ಜನ ಈಗ ಕೊಂಚ ನಿರಾಳ ಆಗಿದ್ದಾರೆ.
PublicNext
04/04/2022 12:25 pm