ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ನಿನ್ನೆಗಿಂತ ಕೊಂಚ ಇಳಿಕೆ ಕಂಡಿದೆ. ನಿನ್ನೆ (ಭಾನುವಾರ) 28,264 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದರೂ ಸಾವಿನ ಸಂಖ್ಯೆಯು ಅರ್ಧಶತಕದ ಗಡಿ ದಾಟಿದೆ.
ರಾಜ್ಯದಲ್ಲಿಂದು 24,172 ಜನರಿಗೆ ಸೋಂಕು ಅಂಟಿದೆ. ಇದರಲ್ಲಿ ಬೆಂಗಳೂರು ಮಹಾನಗರದಲ್ಲಿ 10,692 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವಿಟಿ ದರವು ಶೇ 17.11ರಷ್ಟಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಇಂದು 30,869 ಜನ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ 2,44,331 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಹಾಗೂ ಬೆಂಗಳೂರಿನಲ್ಲಿ 1 ಲಕ್ಷ 34 ಸಾವಿರ ಸಕ್ರಿಯ ಪ್ರಕರಣಗಳಿವೆ. ಇನ್ನು ರಾಜ್ಯದಾದ್ಯಂತ ಇಂದು 56 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಅದರಲ್ಲಿ 12 ಜನ ಬೆಂಗಳೂರಿನವರಾಗಿದ್ದಾರೆ. ಇಂದು 1,41,240 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
PublicNext
31/01/2022 07:18 pm