ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ತಗ್ಗಿದ ದೈನಂದಿನ ಕೊರೊನಾ ಕೇಸ್‌- ಮೃತರ ಸಂಖ್ಯೆ ಭಾರಿ ಏರಿಕೆ

ನವದೆಹಲಿ: ದೇಶದಲ್ಲಿ ದೈನಂದಿನ ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಆದರೆ ಕೊರೊನಾದಿಂದ ಬಲಿಯಾದವರ

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದ 2,35,532 ಜನರಿಗೆ ಸೋಂಕು ದೃಢಪಟ್ಟಿದ್ದು, 871 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ 3,35,939 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 20,04,333ಕ್ಕೆ ಏರಿದ್ದು, ಒಟ್ಟು ಸೋಂಕಿತರಲ್ಲಿ ಶೇಕಡ 4.91 ರಷ್ಟು ಸಕ್ರಿಯ ಪ್ರಕರಣಗಳಿವೆ.

ದೈನಂದಿನ ಪಾಸಿಟಿವಿಟಿ ದರ ಶೇಕಡ 13.39ರಷ್ಟಿದೆ. ಕೋವಿಡ್‌ನಿಂದ ಈವರೆಗೆ ದೆಶದಲ್ಲಿ ಒಟ್ಟು 4,93,198 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಸ ಪ್ರಕರಣಗಳು ಮತ್ತು ರೋಗದ ದೃಢ ಪ್ರಮಾಣ ಕಡಿಮೆಯಾಗಿದೆ. ಗುರುವಾರ 2.85 ಲಕ್ಷ ಪ್ರಕರಣಗಳು ಮತ್ತು ಶುಕ್ರವಾರ 2.51 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ದೇಶದಲ್ಲಿ ಈವರೆಗೆ 165 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.

Edited By : Vijay Kumar
PublicNext

PublicNext

29/01/2022 01:08 pm

Cinque Terre

59.56 K

Cinque Terre

2

ಸಂಬಂಧಿತ ಸುದ್ದಿ