ಕೊಪ್ಪಳ: ನನಗ ಸೂಜಿ ಚುಚ್ಚ ಬ್ಯಾಡ್ರಿ.ನನಗ ಗುಳುಗಿ, ಸೂಜಿ ಆಗಿ ಬರುದೀಲ್ಲಾ.ಬೇಕಾರ ನನ್ನ ಎರಡ ಎತ್ತ ಅದಾವ ತಗೊಂಡ್ ಹೋಗ್ರಿ. ಆದ್ರ ಸೂಚಿ ಚುಚ್ಚ ಬ್ಯಾಡ್ರಿ ಅಂತ ವೃದ್ಧ ರೈತನೊಬ್ಬ ಹೇಳಿ ಕೋವಿಡ್ ಲಸಿಕೆಯನ್ನ ನಿರಾಕರಿಸಿ ರಂಪಾಟ ಮಾಡಿದ್ದಾರೆ.
ಈ ಘಟನೆ ಕೊಪ್ಪಳ ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ನಡೆದಿದೆ. ನನಗ ಸೂಜಿ ಬ್ಯಾಡ್ವೇ ಬ್ಯಾಡ.ಸೂಚಿ ಚುಚ್ಚಿದ ಮ್ಯಾಲೆ ನಾನ್ ಸತ್ರ ಏನ್ ಮಾಡೋದು.ನೀವೂ ಏನೂ ಆಗೋದಿಲ್ಲ ಅಂತ ಹಾಳ್ಯಾಗ್ ಬರೆದ ಕೊಡ್ತೀರೇನ ಅಂತಲೇ ವೃದ್ಧ ರೈತ ಮರು ಪ್ರಶ್ನೆನೂ ಮಾಡಿದ್ದಾ ರೆ.
ರೈತನ ಕಥೀ ಹಿಂಗಾದ್ರೆ,ಇದೇ ಊರಿನ ಮತ್ತೊಬ್ಬ ಅಜ್ಜಿ ಕೂಡ ಲಸಿಕೆ ಹಾಕಿಸಿಕೊಳ್ಳುವದಕ್ಕೆ ರಂಪಾಟ ಮಾಡಿದ್ದಾರೆ. ನಿಮಗೆ ಲಾಭ ಐತಿ ಅದಕ್ಕೆ ಸೂಚಿ ಹಾಕಿಸ್ಕೋತೀರಿ. ನನಗ ಸೂಚಿ ಬ್ಯಾಡ ಅಂತ ಪಟ್ಟು ಹಿಡಿದಿದ್ರು ಈ ಅಜ್ಜಿ.
ಉಸ್ತುವಾರಿ ಅಧಿಕಾರಿ ಅಮೀನ್ ಅತ್ತಾರ ನೇತೃತ್ವದಲ್ಲಿ ಇಲ್ಲಿ ಲಸಿಕಾ ಮೇಳೆ ನಡೆದಿದೆ.ಒಂದೇ ದಿನಕ್ಕೆ ಇಲ್ಲಿ 112 ಜನಕ್ಕೆ ಲಸಿಕೆ ಹಾಕಲಾಗಿದೆ. ಆದರೆ ಈ ಇಬ್ಬರು ವೃದ್ಧರಿಗೆ ಲಸಿಕೆ ಹಾಕೋದ್ರಲ್ಲಿ ಅಧಿಕಾರಿಗಳು ಹೆಣಗಾಡಿ ಬಿಟ್ಟಿದ್ದಾರೆ.
PublicNext
24/01/2022 12:57 pm