ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಜತೆಗೆ ಕೋವಿಡ್ ನಿಂದ ಸಿಲಿಕಾನ್ ಸಿಟಿಯಲ್ಲಿ ಸಾವಿನ ಸಂಖ್ಯೆಯು ಏರಿಕೆ ಕಾಣಿಸುತ್ತಿದೆ. ಕಳೆದ ವಾರ 33 ಮಂದಿ ಮೃತಪಟ್ಟಿದ್ದು, ಇವರಿಗೆ ಕೋರ್ಮಾರ್ಬಿಡಿಟಿ ಇತ್ತಾ ಎಂಬುದನ್ನು ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಮೃತಪಟ್ಟವರ ಪೈಕಿ 21 ವರ್ಷದಿಂದ 40 ವರ್ಷದೊಳಗಿನ 5 ಮಂದಿ 41 ರಿಂದ 60 ವರ್ಷದವರೆಗೆ 9 ಮಂದಿ, 60 ವರ್ಷ ಮೇಲ್ಪಟ್ಟವರು 19 ಮಂದಿ ಇದ್ದಾರೆ.ವಿಪರ್ಯಾಸ ಅಂತಂದ್ರೆ ಯಾವುದೇ ಕಾಯಿಲೆ ಇಲ್ಲದೆ ಡಬಲ್ ಡೋಸ್ ಪಡೆದ 7 ಮಂದಿ ಕೋವಿಡ್ ಬಲಿಯಾಗುತ್ತಿದ್ದಾರೆ.ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ.ಇನ್ನೂ ವಾರ್ಡ್ –ವಾರ್ಡ್ ಗಳಲ್ಲಿ ಕೋವಿಡ್ ಹರಡುತ್ತಿದ್ದು, ಸಿಲಿಕಾನ್ ಸಿಟಿ ಹಾಟ್ ಸ್ಪಾಟ್ ಆಗಿ ಮಾರ್ಪಡುತ್ತಿವೆ.
198 ವಾರ್ಡ್ ಗಳ ಪೈಕಿ 101 ವಾರ್ಡ್ ಗಳು ಡೇಂಜರ್ ಝೋನ್ ಆಗಿದೆ.ಇದರಲ್ಲಿ 33 ವಾರ್ಡ್ ಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿತ್ಯ ಸಾವಿರ ಗಡಿ ದಾಟುತ್ತಿದೆ.68 ವಾರ್ಡ್ ನಲ್ಲಿ 500-1000 ಕೇಸ್ ದಾಖಲಾಗುತ್ತಿದೆ.64 ವಾರ್ಡ್ ಗಳಲ್ಲಿ 250-500 ಮಂದಿಗೆ ಪಾಸಿಟಿವ್ ಕೇಸ್ ಬಂದ್ರೆ,26 ವಾರ್ಡ್ ಗಳಲ್ಲಿ 100 ರಿಂದ 250 ಮಂದಿಗೆ ಸೋಂಕು ದೃಢಪಟ್ಟಿದೆ.7 ವಾರ್ಡ್ ಗಳಲ್ಲಿ 10 ರಿಂದ 100 ಕೇಸ್ ಗಳಷ್ಟೇ ದಾಖಲಾಗಿದೆ.
PublicNext
22/01/2022 02:08 pm