ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜೆಟ್ ಅಧಿವೇಶನಕ್ಕೆ ಕೋವಿಡ್ ತೊಡಕು? : 402 ಸಿಬ್ಬಂದಿಗೆ ಸೋಂಕು ದೃಢ

ಹೊಸದಿಲ್ಲಿ: ಹೆಮ್ಮಾರಿ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು ಸದ್ಯ ಸಂಸತ್ ನ ಬಜೆಟ್ ಅಧಿವೇಶನಕ್ಕೂ ಆಘಾತ ತಂದಿದೆ.

ಈಗಾಗಲೇ 400ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನವರಿ 4 ರಿಂದ 8ರವರೆಗೆ ಸಂಸತ್ ನ 1409 ಉದ್ಯೋಗಿಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 402 ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಯಾಗಿದೆ.

ಸದ್ಯ ಇವರೆಲ್ಲರ ಒಮಿಕ್ರಾನ್ ಪರೀಕ್ಷೆಗಾಗಿ ಜಿನೋಮ್ ಸೀಕ್ವೆನ್ಸಿಂಗ್ ಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 200 ಲೋಕಸಭೆ ಮತ್ತು 69 ರಾಜ್ಯಸಭೆ ಹಾಗೂ 133 ಒಟ್ಟಾರೆ ಸಿಬ್ಬಂದಿ ಕೋವಿಡ್ ಪಾಸಿಟಿವ್ ಗೆ ಒಳಗಾಗಿರುವ ಪಟ್ಟಿ ಇದೆ. ಸಂಸತ್ ನ ಎರಡೂ ಸದನಗಳ ಅನೇಕ ಉದ್ಯೋಗಿಗಳು, ಸೋಂಕಿತ ಸಹೋದ್ಯೋಗಿಗಳ ಜತೆ ಸಂಪರ್ಕಕ್ಕೆ ಬಂದ ಕಾರಣ ಅವರನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ.

Edited By : Nirmala Aralikatti
PublicNext

PublicNext

09/01/2022 02:12 pm

Cinque Terre

109.38 K

Cinque Terre

3