ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಬಹುಪಾಲು ಜನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದ್ದಾರೆ ಎನ್ನುವ ವಿಷಯ ಬೆಂಗಳೂರಿಗರ ನೆಮ್ಮದಿ ಕಸಿದಿದೆ. ಹೌದು ಈ ವರೆಗೆ ರಾಜ್ಯದಲ್ಲಿ ಒಟ್ಟು 333 ಮಂದಿ ಒಮಿಕ್ರಾನ್ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 305 ಕೇಸುಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ಅಂದರೆ ಶೇ. 92 ರಷ್ಟು ಒಮಿಕ್ರಾನ್ ಸೋಂಕಿತರು ಬೆಂಗಳೂರಿನಲ್ಲಿಯೇ ಇದ್ದಾರೆ ಎಂದರ್ಥ.
ಬೆಂಗಳೂರಿನಲ್ಲಿ ಸದ್ಯ ಪತ್ತೆಯಾಗಿರುವ 305 ಒಮಿಕ್ರಾನ್ ಸೋಂಕಿತರ ಪೈಕಿ, 95 ಮಂದಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರೇ, 177 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. 33 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವೆಲ್ಲವೂ ರಾಜ್ಯ ಆರೋಗ್ಯ ಇಲಾಖೆ ಕೊಟ್ಟ ಅಂಕಿ ಅಂಶ. ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿಯೇ ಒಮಿಕ್ರಾನ್ ಸೋಂಕು ಕಂಡು ಬಂದಿದ್ದು, ಅವರನ್ನು ಏರ್ ಪೋರ್ಟ್ ನಲ್ಲಿಯೇ ಟೆಸ್ಟ್ ಮಾಡಿಸಿ ಕ್ವಾರಂಟೈನ್ ಗೆ ಒಳ ಪಡಿಸಲಾಗುತ್ತಿದೆ. ಅವರ ಯಾರ ಸಂಪರ್ಕಕ್ಕೂ ಬಂದಿಲ್ಲ ಎನ್ನುವುದು ಅಧಿಕಾರಿಗಳು ಕೊಟ್ಟ ಮಾಹಿತಿ.
PublicNext
09/01/2022 01:46 pm