ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್​​ಗೆ ಕೊರೊನಾ ಕಂಟಕ​​​; ಅಮೃತಸರಕ್ಕೆ ಬಂತು 125 ಜನ ಸೋಂಕಿತರಿದ್ದ ವಿಮಾನ

ಚಂಡೀಗಡ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಮಹಾರಾಷ್ಟ್ರ, ಕೇರಳ, ದೆಹಲಿ, ಗುಜರಾತ್, ಪಂಜಾಬ್​​ ಮುಂತಾದ ರಾಜ್ಯಗಳಲ್ಲಿ ಕೋವಿಡ್ ಸೋಂಕು ಮೇರೆ ಮೀರುತ್ತಿದೆ.

ಈ ನಡುವೆ ಪಂಜಾಬ್​ಗೆ ಮತ್ತೊಂದು ಆಘಾತ ಎದುರಾಗಿದ್ದು, ಕೊರೊನಾ ವಿಮಾನವೊಂದು ಬಂದಿಳಿದಿದೆ. ಸುಮಾರು 170 ಪ್ರಯಾಣಿಕರನ್ನು ಹೊಂತ ವಿಮಾನವೊಂದು ಇಟಲಿಯ ರೋಮ್​ನಿಂದ ಅಮೃತ್​​ಸರಕ್ಕೆ ಬಂದಿಳಿದಿದೆ. ಈ ವಿಮಾನದಲ್ಲಿ ಪ್ರಯಾಣಿಸಿದ ಬರೋಬ್ಬರಿ 125 ಜನರಲ್ಲಿ ಕೊರೊನಾ ಸೋಂಕು ಇರೋದು ದೃಢ ಪಟ್ಟಿದ್ದು, ಇಡೀ ರಾಜ್ಯವನ್ನು ಬೆಚ್ಚಿ ಬಿಳಿಸಿದೆ.

ಇನ್ನು ಇಂದು ಇಟಲಿಯಿಂದ ಪಂಜಾಬ್​​ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಾರ್ಟೆಡ್​​ ವಿಮಾನದಲ್ಲಿ 170 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರು ಇದ್ದರು. ಈ ಪೈಕಿ 125 ಮಂದಿ ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಖುದ್ದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

06/01/2022 04:46 pm

Cinque Terre

54.46 K

Cinque Terre

0